ದಿನದ ಅಪರಾಧಗಳ ಪಕ್ಷಿನೋಟ 05ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 04.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. 

 – ಜೂಜಾಟ ಕಾಯ್ದೆ : 01

ಕೆ.ಜಿ.ಎಫ್ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲ್ಲೂಕು ಹುನ್ಕುಂದ ಗ್ರಾಮದಲ್ಲಿರುವ ಶ್ರೀ.ಈಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಲ್ಲುಬಂಡೆಗಳ ಮದ್ಯ ಭಾಗದಲ್ಲಿರುವ ಖಾಲಿ ಜಾಗದಲ್ಲಿ ದಿನಾಂಕ 04.07.2018 ರಂದು ಮದ್ಯಾಹ್ನ 13.00 ಗಂಟೆಗೆ ೧. ಸತೀಶ್ ಕುಮಾರ್, ೨. ಲೋಕೇಶ್, ೩. ನಾರಾಯಣಪ್ಪ, ೪. ಶ್ರೀನಿವಾಸ್, ೫. ಮುರಳಿ ಮತ್ತು ನವೀನ್, ಹುನ್ಕುಂದ ಗ್ರಾಮದವರು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರನ್ನು ಸಿ.ಇ.ಎನ್ ಪಿ.ಐ, ಆಂಜಪ್ಪ. ಎಲ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳನ್ನು ಮತ್ತು ರೂ.10,680/- ನಗದು ಹಣವನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಭರತ್ ಬಿನ್ ವಿನ್ಸೆಂಟ್, ಸುಸೈಪಾಳ್ಯಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ತಮ್ಮನಾದ ಲೀನಸ್, 30 ವರ್ಷ ರವರು ಗಿರಿಗೌರಿ ಎಂಬ ಹುಡುಗಿಯನ್ನು ಪ್ರೀಸಿಸುತ್ತಿದ್ದು, ಮನೆಯಲ್ಲಿ ವಿವಾಹಕ್ಕೆ ಹಿರಿಯರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೂಂಡು ದಿನಾಂಕ 01.07.2018 ರಂದು ಬೆಳಿಗ್ಗೆ 10:00 ಗಂಟೆಯಿಂದ 11:00 ಗಂಟೆಯ ಮಧ್ಯೆ ಬಾಣಗಿರಿ ಗ್ರಾಮದ ಬಳಿ ಇರುವ ಕೆರೆಯ ಹತ್ತಿರ ಲೀನಸ್ ರವರು ಯಾವುದೋ ವಿಷವನ್ನು ಸೇವನೆ ಮಾಡಿದ್ದು, ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ವತ್ರೆಯಲ್ಲಿ ದಾಖಲು ಮಾಡಿದ್ದು, ದಿನಾಂಕ 04.07.2018 ರಂದು ಸಂಜೆ  4:00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

– ಇತರೆ :  02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನವನ್ನು ನಿರ್ಲಕ್ಷತನದಿಂದ ಚಲಾಯಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್. ಸಿ, ಪಿ.ಎಸ್.ಐ, ಬಂಗಾರಪೇಟೆ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು  ಬಂಗಾರಪೇಟೆ – ಟೇಕಲ್ ಮುಖ್ಯ ರಸ್ತೆ ರಾಮಾಪುರ ಗೇಟ್ ಬಳಿ ಗಸ್ತು ಮಾಡುತ್ತಿದ್ದಾಗ, ತಬ್ರೀಜ್‌, ಮಾಕಾರಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ಎಂಬಾತನು ನೊಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನ TVS FIERO ದ್ವಿಚಕ್ರ ವಾಹನವನ್ನು ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ಭಯವನ್ನುಂಟು ಮೂಡಿಸಿದ್ದರಿಂದ ಆತನನ್ನು ಹಿಡಿದು ಪ್ರಕರಣ ದಾಖಲಿಸಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕರ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷತನದಿಂದ ಮೃತಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ರತ್ನಮ್ಮ ಕೊಂ ಮುನಿವೆಂಕಟಪ್ಪ, ನ್ಯೂಟೌನ್, ಬೇತಮಂಗಲ ರವರ ಗಂಡ ಮುನಿವೆಂಕಟಪ್ಪ, 45 ವರ್ಷ ಎಂಬವರು ದೊಡ್ಡಕಾರಿ ಗ್ರಾಮದ ವಾಸಿಯಾದ ವೆಂಕಟರಾಮಪ್ಪ ರವರ ಮನೆಯಲ್ಲಿ  ದಿನಾಂಕ: 03-07-2018 ರಂದು ಮಧ್ಯಾಹ್ನ 3.00 ಗಂಟೆಯಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿರುವಾಗ,  ಮಾಲೀಕರಾದ ವೆಂಕಟರಾಮಪ್ಪ, ಹೆಂಡತಿ ಪ್ರಮೀಳ, ಮಗಳು ಅಮುಲು ಮತ್ತು ಬೆಸ್ಕಾಂ (ಎಸ್.ಒ ಮತ್ತು ಲೈನ್ ಮ್ಯಾನ್) ರವರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ  ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *