ದಿನದ ಅಪರಾಧಗಳ ಪಕ್ಷಿನೋಟ 05ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 04.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಇತರೆ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹರಿನಾಥ, ಪಿ.ಎಸ್.ಐ, ಮಹದೇವಪುರ ಪೊಲೀಸ್ ಠಾಣೆ ರವರು ಮಹದೇವಪುರ ಪೊಲೀಸ್  ಠಾಣಾ ಮೊ.ಸಂ 30/2020,  02)  289/2020, 03)  ಮೊ.ಸಂ 403/2020, 04)  406/2020 ಕಲಂ 454, 457, 380  ಐ .ಪಿ.ಸಿ  ಪ್ರಕರಣಗಳಲ್ಲಿ  ಗುಮಾನಿ ಆಸಾಮಿಯಾದ  ಅಪ್ಪೇನ್    ಕೆ.ಜಿ.ಎಫ್ ಆಂಡ್ರಸನ್ ಪೇಟೆ ಯ ಆತನ  ವಾಸದ ಮನೆಯಲ್ಲಿ ಇರುವುದಾಗಿ ತಿಳಿದು, ಸಿಬ್ಬಂದಿಗಳಾದ  ಅರ್ಜುನ್ ,  ಶ್ರೀ ಭಾಸ್ಕರ್  ಕಂಬಾರ, ಶ್ರೀ ಸಿದ್ದಪ್ಪ ಸಿಂದಗಿ,  ಶ್ರೀ ರವಿ ಕೆ.ಎಲ್, ಶ್ರೀ ಮಮತೇಶ್ ಗೌಡ ರವರೊಂದಿಗೆ   ದಿನಾಂಕ 03.03.2021 ರಂದು  ರಾತ್ರಿ 12.40 ಗಂಟೆಗೆ  ಕೆ.ಜಿ.ಎಫ್ ಗೆ ಬಂದು ಅಪ್ಪೇನ್‌ ರವರ ಮನೆ ಬಾಗಿಲನ್ನು ತಟ್ಟಿದಾಗ,  ಮನೆಯ ಹಿಂಬಾಗಿಲಿನ ಮೂಲಕ  ಒಬ್ಬ ಹುಡುಗ  ಹೊರಗೆ ಬಂದು,   ಕಾಂಪೌಂಡ್  ಗೋಡೆಯನ್ನು  ಜಿಗಿದು   ಓಡಲು  ಪ್ರಯತ್ನಿಸಿದ್ದು,  ಆತನನ್ನು ಹಿಡಿದು  ವಿಚಾರಣೆ ಮಾಡುತ್ತಿದ್ದಾಗ,  ಅಪ್ಪೇನ್ ಮತ್ತು ಇನ್ನೊಬ್ಬ ಆಸಾಮಿ ಲಾಂಗ್ ಮತ್ತು  ದೊಣ್ಣೆಯನ್ನು ಹಿಡಿದುಕೊಂಡು ಓಡಿ ಬಂದಾಗ, ದೂರುದಾರರು “ನಾನು  ಬೆಂಗಳೂರಿನ  ಮಹದೇವಪುರ  ಪೊಲೀಸ್  ಸಬ್-ಇನ್ಸ್ ಪೇಕ್ಟರ್  ಮತ್ತು ನನ್ನೊಂದಿಗೆ  ಇರುವವರು   ಪೊಲೀಸ್ ಸಿಬ್ಬಂದಿಗಳು” ಎಂದು ಹೇಳಿ  ಐ.ಡಿ  ಕಾರ್ಡ್ ಅನ್ನು   ತೋರಿಸಿದಾಗ, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ  ಲಾಂಗ್  ನಿಂದ  ದೂರುದಾರರ  ತಲೆ ಮೇಲೆ  ಹೊಡೆಯಲು ಬಂದಾಗ,  ದೂರುದಾರರು ಎರಡೂ ಕೈಗಳನ್ನು ಅಡ್ಡ ಇಟ್ಟಿದ್ದರಿಂದ, ಕೈಗಳಿಗೆ ತೀರ್ವ ಸ್ವರೂಪದ  ರಕ್ತಗಾಯಗಳಾಗಿದ್ದು, ದೂರುದಾರರು  ತನ್ನ ಸರ್ವೀಸ್  ರಿವಾಲ್ ವರ್  ನಿಂದ ಫೈಯರ್ ಮಾಡಿದ್ದು, ನಂತರ ದೊಣ್ಣೆಯಿಂದ ಶ್ರೀ ಭಾಸ್ಕರ್  ಕಂಬಾರ, ಹೆಚ್.ಸಿ ರವರಿಗೆ ಹೊಡೆದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ,   ಅಲ್ಲಿಂದ  ಓಡಿ ಹೋಗಿರುತ್ತಾರೆ.

Leave a Reply

Your email address will not be published. Required fields are marked *