ದಿನದ ಅಪರಾಧಗಳ ಪಕ್ಷಿನೋಟ 05ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 04.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.10.2020 ರಂದು ಮಧ್ಯಾಹ್ನ 1.00 ಗಂಟೆಯಲ್ಲಿ ಸ್ಮಿತ್ ರಸ್ತೆಯ ಬಳಿ ಇರುವ ಬಿ.ಜಿ.ಎಂ.ಎಲ್ ಶಾಲೆಯ ಗ್ರೌಂಡ್ ಬಳಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸೂರ್ಯ ಬಿನ್ ಚಂದ್ರಕುಮಾರ್‌, ಸಿ.ಎ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ಮದ್ಯಪಾನ ಸೇವನೆ ಮಾಡುತ್ತಿದ್ದವನನ್ನು ಮತ್ತು ಸ್ಥಳದಲ್ಲಿದ್ದ 1) BANGALORE WHISKY 90 ML  1 ಪಾಕೇಟ್, 2.) BANGALORE WHISKY 90 ML  2 ಖಾಲಿ ಪ್ಯಾಕೆಟುಗಳು, 3) ಎರಡು ನೀರಿನ ಪಾಕೇಟುಗಳನ್ನು 4) ಎರಡು ಪ್ಲಾಸ್ಟಿಕ್ ಲೋಟಗಳನ್ನು ಎ.ಎಸ್.ಐ ಶ್ರೀ. ರಾಮದಾಸು ಮತ್ತು ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *