ದಿನದ ಅಪರಾಧಗಳ ಪಕ್ಷಿನೋಟ 04 ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 03.07.2018 ರಂದು  ಸಂಜೆ 05.00  ಗಂಟೆಯಿಂದ ದಿನಾಂಕ 04.07.2018 ರಂದು  ಬೆಳಿಗ್ಗೆ  10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. 

 
– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಟರಾಜ್ ಬಿನ್ ಸಿದ್ದಪ್ಪ, ಗೊಲ್ಲಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರು ದಿನಾಂಕ:03.07.2018 ರಂದು ಸಂಜೆ 5.00 ಗಂಟೆಯಲ್ಲಿ ರಾಮಾಪುರ ಗೇಟ್ ಸಮೀಪ ಇದ್ದಾಗ, ಟೇಕಲ್ ಕಡೆಯಿಂದ ಟಾಟಾ ಎಸಿಇ ವಾಹನ ಸಂಖ್ಯೆ ಕೆಎ-53 ಸಿ-8366 ರ ವಾಹನವು ಬಂಗಾರಪೇಟೆಗೆ ಹೋಗಲು ರಾಮಪುರ ಗೇಟ್ ಸಮೀಪ ರಸ್ತೆಯಲ್ಲಿ ಬರುತ್ತಿದ್ದಾಗ, ಅದರ ಹಿಂಬದಿಯಲ್ಲಿ ಟಿಪ್ಪರ್ ಲಾರಿ ಸಂಖ್ಯೆ ಕೆಎ-53 ಡಿ-3488 ರ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಾಟಾ ಎಸಿಇ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಟಾಟಾ ಎಸಿಇ ನ ಮುಂದಿನ ಬಲಭಾಗಕ್ಕೆ ಡಿಕ್ಕಿ ಹೊಡೆದು,  ಬಂಗಾರಪೇಟೆ ಕಡೆಯಿಂದ ಟೇಕಲ್ ಕಡೆಗೆ ಹೋಗುತ್ತಿದ್ದ ಹೊಸ ಜುಪಿಟರ್ ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆದಿದ್ದು, ದ್ವಿಚಕ್ರವಾಹನ ಮತ್ತು ಟಾಟಾ ಎಸಿಇ ವಾಹನಗಳು ಪೂರ್ಣ ಜಕ್ಕಂಗೊಂಡಿದ್ದು ದ್ವಿಚಕ್ರ ವಾಹನದ ಸವಾರರಾದ ಮುನಿಕೃಷ್ಣಪ್ಪ ಬಿನ್ ಚಿನ್ನಪ್ಪ, ಮಂಗಾಪುರ ಗ್ರಾಮ, ಮಾಲೂರು ತಾಲ್ಲೂಕು,  ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ ರವಿ, ಹುಲಿಮಂಗಲ ಹೊಸಕೋಟೆ ಎಂಬುವರು ಮತ್ತು ಟಾಟಾ ಎಸಿಇ ನ ವಾಹನದ ಚಾಲಕನಾದ ಹೊಸಕೋಟೆ ಹರೀಶ್ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾದ ಮೃತಪಟ್ಟಿದ್ದು, ಟಾಟಾ ಎಸಿಇ ನಲ್ಲಿದ್ದ ಸೋಮೇಶ್ ರವರಿಗೆ ಕಾಲು ಮತ್ತು ಕೈಗಳು ಮುರಿದು ಹೋಗಿ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತದೆ. ಸದರಿ ಟಿಪ್ಪರಿ ಲಾರಿಯ ಚಾಲಕ ವಾಹನವನ್ನು  ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

– ಇತರೆ :  02

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:03.07.2018 ರಂದು ಆರೋಪಿಯಾದ ಗಿಲ್ಬರ್ಟ್ ಬಿನ್ ಇಸಾಕ್, ಬಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ಎಂಬುವರು ಚಾಂಪಿಯನ್ ರೀಫ್ಸ್ ನ ಉಪ ಕಾರಾ ಗೃಹದ ದಕ್ಷಿಣ ಭಾಗದ ಖಾಲಿ ಮೈದಾನದಲ್ಲಿ ಅಕ್ರಮವಾಗಿ 304 ಗ್ರಾಂ ಗಾಂಜಾ ಇಟ್ಟಿಕೊಂಡಿದ್ದವನನ್ನು  ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪಿ.ಐ ಶ್ರೀ. ಆಂಜಪ್ಪ. ಎಲ್. ಮತ್ತು ಸಿಬ್ಬಂದಿಯವರು ಹಿಡಿದು  ಪ್ರಕರಣ ದಾಖಲಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನವನ್ನು ನಿರ್ಲಕ್ಷತನದಿಂದ ಚಲಾಯಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03-07-2018 ರಂದು ಮಧ್ಯಾಹ್ನ  1-00 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ರವಿಕುಮಾರ್. ಸಿ, ಪಿ.ಎಸ್.ಐ, ಬಂಗಾರಪೇಟೆ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು ಬಂಗಾರಪೇಟೆ ಪಟ್ಟಣದಲ್ಲಿ ಗಸ್ತು ಮಾಡುತ್ತಿದ್ದಾಗ, ಆರೋಪಿ ಅಫ್ರೀದ್ ಖಾನ್ ಬಿನ್ ಆಯೂಬ್, ಟಿಪ್ಪು ನಗರ, ಬಂಗಾರಪೇಟೆ ಎಂಬುವನು ಯಮಹಾ ದ್ವಿಚಕ್ರ YBX-125 KA-03-W-6737 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂಗಾರಪೇಟೆಯ ಪುರಸಭೆಯ ಸಮೀಪದ ತಿರುವಿನಲ್ಲಿ ಚಲಾಯಿಸಿಕೊಂಡು ವೀಲಿಂಗ್ ಮಾಡಿ ಸಾರ್ವಜನಿಕರಿಗೆ ಭಯವನ್ನುಂಟು ಮೂಡಿಸಿದ್ದರಿಂದ ಆತನನ್ನು ಹಿಡಿದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಅಮುದಾ ಕೊಂ ರಾಮು, ವಿವೇಕ್‌ ನಗರ, ಕೆ.ಜಿ.ಎಫ್ ರವರ ಗಂಡ ರಾಮು ರವರು 2016 ನೇ ಸಾಲಿನಲ್ಲಿ ತೀರಿಕೊಂಡಿದ್ದು, ಅಂದಿನಿಂದ ದೂರುದಾರರ ಮಗಳು ಪ್ರೀತಿ 19 ವರ್ಷ ರವರು ತುಂಬಾ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ.02.07.2018 ರಂದು ಸಂಜೆ 4-00 ಗಂಟೆಗೆ ಮನೆಯ ಬೆಡ್ ರೂಮಿನ ಮೇಲ್ಚಾವಣಿಯ ಕಬ್ಬಿಣದ ಹುಕ್ಕಿಗೆ ವೇಲ್ ಬಟ್ಟೆಯಿಂದ ನೇಣುಹಾಕಿಕೊಂಡು  ಮೃತಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *