ದಿನದ ಅಪರಾಧಗಳ ಪಕ್ಷಿನೋಟ 04 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 03.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು. ಮಾಲತಿ ಬಿನ್ ಬಾಬು, ದೊಡ್ಡಕಲ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ ಬಾಬು ರವರು  ದಿನಾಂಕ:03.01.2021 ರಂದು ಸಂಜೆ 6.00 ಗಂಟೆಯಲ್ಲಿ ದ್ವಿಚಕ್ರವಾಹನ ಹೋಂಡಾ ಲಿವೋ ಕೆ.ಎ 08 ಯು 6090 ರ ಹಿಂಬದಿಯಲ್ಲಿ ಸ್ನೇಹಿತ ರಮೇಶ್ ರವರನ್ನು ಕುಳ್ಳಿರಿಸಿಕೊಂಡು ನೇರಳೆ ಕೆರೆ ಕಡೆಯಿಂದ ಹೆನ್ರೀಸ್ ಬಾಟಗಂಗಮ್ಮ ದೇವಸ್ಥಾನ ದಾಟಿ ಪೈವ್ ಲೈಟ್ಸ್ ಸರ್ಕಲ್ ಕಡೆಗೆ ಬರುತ್ತಿದ್ದಾಗ, ಪೈವ್ ಲೈಟ್ಸ್ ಸರ್ಕಲ್ ಕಡೆಯಿಂದ ಸ್ಕಾರ್ಫಿಯೋ ಕೆ.ಎ 05 ಎ.ಜಿ 8738 ಕಾರಿನ ಚಾಲಕ ಅಶೋಕ್ ಎಂಬಾತನು ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲಯಿಸಿಕೊಂಡು ಬಂದು ಬಾಬು ರವರ ದ್ವಿಚಕ್ರವಾಹನಕ್ಕೆ ಡಿಕ್ಕಿಪಡಿಸಿದ್ದು, ಬಾಬು ರವರಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರ ರಮೇಶ್ ರವರಿಗೂ ಹಾಗೂ ಕಾರಿನಲ್ಲಿದ್ದ ಆರೋಪಿಯ ಸಮೇತ 8 ಜನರಿಗೆ ಗಾಯಗಳಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಗಮ್ಮ, ದಿನ್ನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ದೇವರಾಜ್ ಬಿನ್ ಮುನಿಯಪ್ಪ, 35 ವರ್ಷ  ರವರಿಗೆ 4 ವರ್ಷಗಳಿಂದ ಹೊಟ್ಟೆನೋವು ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 03.01.2021 ರ ಬೆಳಿಗ್ಗೆ 6.30 ಗಂಟೆಯಿಂದ 8.00 ಗಂಟೆಯ ಮಧ್ಯೆ ದಿನ್ನೂರು ಗ್ರಾಮದ ವೆಂಕಟಪ್ಪ ರವರ ಜಮೀನಿನಲ್ಲಿರುವ ಹುಣಸೆ ಮರದ ಕೊಂಬೆಗೆ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *