ದಿನದ ಅಪರಾಧಗಳ ಪಕ್ಷಿನೋಟ 04 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 03.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮಮ್ಮ ಕೊಂ ಲೇಟ್ ರಘುರಾಮಪ್ಪ, ಜಕ್ಕರಸನಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಸರ್ವೆ ನಂ 2/4 ಹಾಗೂ ಖಾತೆ ಸಂಖ್ಯೆ 176 ರಲ್ಲಿನ ಜಮೀನಿನಲ್ಲಿ 15 ಗುಂಟೆ ಜಮೀನನ್ನು 2019 ನೇ ಸಾಲಿನಲ್ಲಿ ಶ್ರೀ.ಕೆ.ವಿ.ಸುದರ್ಶನ್ ಕುಮಾರ್ ಎಂಬುವವರಿಂದ ಖರೀದಿಸಿ, ರಿಜಿಸ್ಟರ್ ಮಾಡಿಸಿಕೊಂಡು ಸಾಗುವಳಿ ಮಾಡಿಕೊಂಡಿದ್ದು, ದಿನಾಂಕ 02.07.2020 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ದೂರುದಾರರು ಟ್ರಾಕ್ಟರ್ ಮೂಲಕ ಸದರಿ ಜಮೀನನ್ನು ಉಳುಮೆ ಮಾಡಿಸಲು, ಜಮೀನಿನಲ್ಲಿ ಬೆಳೆದಿದ್ದ ಮುಳ್ಳು ಗಿಡಗಳನ್ನು ಕೀಳುತ್ತಿದ್ದಾಗ, ದೂರುದಾರರ ಗಂಡನ ತಮ್ಮನಾದ ಶ್ರೀರಾಮಪ್ಪ, ಆತನ ಹೆಂಡತಿ ಶ್ರೀಮತಿ ಸರಸಮ್ಮ ಹಾಗೂ ಮಗಳು ಸುಜಾತ ರವರು ಅಲ್ಲಿಗೆ ಹೋಗಿ “ಈ ಜಮೀನಿನಲ್ಲಿ ನಮಗೂ ಭಾಗ ಇದೆ, ಇಲ್ಲಿ ಏಕೆ ನೀನು ಕೆಲಸ ಮಾಡುತ್ತಿದ್ದಿಯಾ” ಎಂದು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *