ದಿನದ ಅಪರಾಧಗಳ ಪಕ್ಷಿನೋಟ 04 ನೇ ಆಗಸ್ಟ್ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:03.08.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಹಲ್ಲೆ :01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.08.2019 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಈ ಕೇಸಿನ ದೂರುದಾರರಾಧ ನಾರಾಯಣಮ್ಮ, ಚಿಕ್ಕಕಲ್ಲಹಳ್ಳಿ, ಮಾರಿಕುಪ್ಪಂ ರವರು ಮನೆ ಕಟ್ಟುತ್ತಿರುವಾಗ ಈ ಕೇಸಿನ ಆರೋಪಿ ಮುನಿರತ್ನಮ್ಮ ರವರ ತಮ್ಮನ ಮಕ್ಕಳು ದೂರುದಾರರ ಮನೆ ಮುಂದೆ ಆಟವಾಡುತ್ತಿದ್ದು ಮಕ್ಕಳು ಅಲ್ಲಿ ಇದ್ದರೆ ಕಲ್ಲು ಮಣ್ಣು ಬಿದ್ದು ತೊಂದರೆವಾಗುದೆಂದು ಬೇರೆ ಕಡೆ ಹೋಗಲು ತಿಳಿಸಿದ್ದಕ್ಕೆ, ಆರೋಪಿ ಮುನಿರತ್ನಮ್ಮ ಮತ್ತು ಪಾಪಿರೆಡ್ಡಿ ರವರು ಕೆಟ್ಟ ಮಾತುಗಳಿಂದ ಬೈದು ದೂರುದಾರರ ಮೇಲೆ ಹಲ್ಲೆ ಮಾಡಿರುತ್ತಾರೆ. ಜಗಲ ಬಿಡಿಸಲು ಬಂದ ದೂರುದಾರರ ಮಗ ಚಂದ್ರ ಶೇಖರ್‍ ರವರ ಮೇಲೆ ಸಹ ಹಲ್ಲೆ ಮಾಡಡಿರುತ್ತಾರೆ.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಘವೇಂದ್ರ ಬಿನ್ ಮುನಿಯಪ್ಪ, ಅಜ್ಜಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮನಾದ ಅಶೋಕ, 25 ವರ್ಷ ರವರು ದಿನಾಂಕ 02.08.2019 ರಂದು ರಾತ್ರಿ 9.30 ಗಂಟೆಯಲ್ಲಿ ಹೀರೋಹೋಂಡಾ ಸಿ.ಡಿ ಡೀಲಕ್ಸ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-08 ಎಕ್ಸ್-8336 ರಲ್ಲಿ ತೊರಲಕ್ಕಿ ಗ್ರಾಮದಿಂದ ಬೂದಿಕೋಟೆಗೆ ಬರಲು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಉಕ್ಕುಂದ ಹಾಗೂ ದ್ಯಾವರಹಳ್ಳಿ ಸರ್ಕಲ್ ಮದ್ಯೆ ಮರಕ್ಕೆ ಡಿಕ್ಕಿಹೊಡೆದಿದ್ದು, ಅಶೋಕ ರವರಿಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *