ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 03.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮರೆಡ್ಡಿ, ಪೂಜಾರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ:23.05.2020 ರಂದು ಬೆಳಗ್ಗೆ 09.00 ಗಂಟೆಯಲ್ಲಿ ಪಂಚಾಯ್ತಿವತಿಯಿಂದ ನೀರು ಟ್ಯಾಂಕರ್ ಊರಿಗೆ ಬಂದಿದ್ದು, ಆದರೆ ಮುನಿರಾಜು ರವರು “ನಾನೇ ನೀರು ಹೊಡಿಸಿರುತ್ತೇನೆ” ಎಂದು ಹೇಳಿ ದೂರುದಾರರೊಂದಿಗೆ ಜಗಳಮಾಡಿದ್ದು, ಅಷ್ಟರಲ್ಲಿ ದೂರುದಾರರ ಮಗ ಚಂದ್ರಶೇಖರ್, ಸೊಸೆ ರೂಪ ಹಾಗೂ ಹೆಂಡತಿ ಇಂದ್ರಮ್ಮ ರವರು ಜಗಳ ಬಿಡಿಸಲು ಬಂದಿದ್ದು, ಮುನಿರಾಜು, ಮಂಜುಳಾ, ಗಂಗೋತ್ರಿ, ಶ್ರಾವಣಿ ಮತ್ತು ಧನುಷ್ ರವರು ಕೈಗಳಿಂದ ಹೊಡೆದಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಮಣ ಬಿನ್ ಮುನಿಕೃಷ್ಣಪ್ಪ, ಕಾಕಿನಾತ ಗ್ರಾಮ, ಕೋಲಾರ ತಾಲ್ಲೂಕು ರವರ ಹೆಂಡತಿ ಶ್ರೀಮತಿ. ಪವಿತ್ರ, 21 ವರ್ಷ ರವರು ದಿನಾಂಕ 02.06.2020 ರಂದು ಮದ್ಯಾಹ್ನ 3.45 ಗಂಟೆಯಲ್ಲಿ ಬಂಗಾರಪೇಟೆಯ ಶುಶೃತ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಯತೀಶ್ವರಿ, ಸ್ವರ್ಣನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರ ಗಂಡನಾದ ಧನಂಜಯ್, 42 ವರ್ಷ ರವರು ಮದ್ಯವ್ಯಸನಿಯಾಗಿದ್ದು, ಯಾವುದೇ ಕೆಲಸ ಮಾಡಲು ಶಕ್ತಿಯಿಲ್ಲದೆ ಹಾಗೂ ಕುಡಿಯಲು ಹಣ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ. 03.06.2020 ರಂದು ರಾತ್ರಿ ಬೆಡ್ ರೂಮಿನಲ್ಲಿರುವ ಸೀಲಿಂಗ್ ಪ್ಯಾನಿಗೆ ನೂಲು ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.