ದಿನದ ಅಪರಾಧಗಳ ಪಕ್ಷಿನೋಟ 04ನೇ ಮೇ 2020 

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ   ದಿನಾಂಕ 03.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಬು ತಾಹೀರ್‌ ಬಿನ್ ನಯಾಜ್‌ ಅಹ್ಮದ್‌‌, ಓಲ್ಡ್‌ ಪೋಸ್ಟ್‌ ಆಫೀಸ್‌ ರಸ್ತೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 03.05.2020 ರಂದು ಬೆಳಿಗ್ಗೆ 11.30 ಗಂಟೆಗೆ ರಾಬರ್ಟ್ ಸನ್ ಪೇಟೆಯ 2ನೇ ಎಂ.ಜಿ ಮಾರುಕಟ್ಟೆಯಲ್ಲಿರುವ ತನ್ನ ಹಳೆಯ ಮರದ ಸಾಮಗ್ರಿಗಳ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ಶಂಕರ್, ರೆಹಮತ್ವುಲ್ಲ @ ಕಾಲು ಮತ್ತು ಹರೀಶ್ ರವರು ಅಂಗಡಿಯ ಬಳಿ ಹೋಗಿ, ದೂರುದಾರರೊಂದಿಗೆ ವಿನಾ ಕಾರಣ ಗಲಾಟೆ ಮಾಡಿ,  ಚಾಕು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನೀಲಮೇಘನ್‌ ಬಿನ್ ಏಕಾಂಬರಂ, ಇ.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಮಗಳಾದ ಕು|| ಶ್ವೇತ. ಎನ್‌., 25 ವರ್ಷ ರವರು ದಿನಾಂಕ: 01-05-2020 ರಂದು ರಾತ್ರಿ 09-30 ಗಂಟೆಯಲ್ಲಿ ಅಂಗಡಿಗೆ ಹೋಗಿ ಬರುತ್ತೇನೆಂದು ತಿಳಿಸಿ ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *