ದಿನದ ಅಪರಾಧಗಳ ಪಕ್ಷಿನೋಟ 04ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:03.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.  ಸುರೇಂದ್ರ ಅಶೋಕ ಪನ್ಸಾಂಬಲ್, ಸಿ.ಎಸ್.ಓ, ಬಿ.ಜಿ.ಎಂ.ಎಲ್,ಸ್ವರ್ಣ ಭವನ, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ 03.03.2020 ರಂದು ಬೆಳಿಗ್ಗೆ 09-50 ಗಂಟೆಗೆ ಗಸ್ತು ಮಾಡುತ್ತಿದ್ದಾಗ ಬಿ.ಜಿ.ಎಂ.ಎಲ್ ಆಸ್ಪತ್ರೆಯ ಕಾಂಪೌಂಡ್ ನ  ಮನೆಗಳ ಬಳಿ ಯಾರೋ ಕಳ್ಳರು 02 ಅರ್ಕ್ಲಿ ಪಾರಂ  ಮರಗಳನ್ನು ಕತ್ತರಿಸಿ ಮರಗಳನ್ನು  ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಸಮೀವುಲ್ಲಾ, ಕಲ್ಲಿಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 02.03.2020 ರಂದು ರಾತ್ರಿ 7.00 ಗಂಟೆಯಲ್ಲಿ ಬಂಗಾರಪೇಟೆ ಬಸ್ ನಿಲ್ದಾಣ ಮುಂಭಾಗದಲ್ಲಿ ನಿಂತಿದ್ದಾಗ, ಕೆಜಿಎಫ್ ಕಡೆಯಿಂದ ಬಸ್ ಸಂಖ್ಯೆ ಕೆಎ-51-ಎಇ-5207 ನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ, ಕಾಲುಗಳಿಗೆ ರಕ್ತಗಾಯಗಳಾಗಿರುತ್ತದೆ.

 

ದೂರುದಾರರಾದ ಶ್ರೀ. ಅಂಬರೀಶ್‌ ಬಿನ್ ಪಾಪಯ್ಯ, ಸಕ್ಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 03-03-2020 ರಂದು ಸಂಜೆ 5-30 ಗಂಟೆಯಲ್ಲಿ ಕೋಲಾರಕ್ಕೆ ಹೋಗಲು ಡಿಯೋ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08 ವೈ-2437  ನ್ನು ಚಲಾಯಿಸಿಕೊಂಡು ದಿಂಬ ಬಳಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ, ದ್ವಿಚಕ್ರವಾಹನ ಸಂಖ್ಯೆ ಕೆ.ಎ-07 ವೈ-4064 ರ ಸವಾರ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಗೇಶ್ವರಿ ಕೊಂ ರಾಜೇಶ್‌, ಪಂಡಾರಂ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ ತಮ್ಮನಿಗೂ ಮತ್ತು ಅದೇ ಕೇರಿಯ ವಾಸಿಗಳಾದ ಹರಿಓಂ ಮತ್ತು ಓಂಪ್ರಕಾಶ್ ರವರಿಗೆ ದಿನಾಂಕ 28.02.2020 ರಂದು ಸಂಜೆ 06.30 ಗಂಟೆಯಲ್ಲಿ ಗಲಾಟೆಗಳಾಗಿದ್ದು, ರಾತ್ರಿ 07:00 ಗಂಟೆಗೆ ಗೇಶ್ವರಿ ಮತ್ತು ಅವರ ಗಂಡ ದ್ವಿಚಕ್ರ ವಾಹನದಲ್ಲಿ ಕಮಲ್ ಮೆಡಿಕಲ್ ಸ್ಟೋರ್ ಬಳಿ ಇದ್ದಾಗ, (1)ಹರಿಓಂ, (2) ಓಂಪ್ರಕಾಶ್, (3) ಪಳನಿ (4) ರಘು (5) ಕದರು ಮತ್ತು (6) ಆಶೋಕ್ ರವರು ಏಕಾಏಕಿ ಮಗೇಶ್ವರಿ ಮತ್ತು ಆಕೆಯ  ಗಂಡನಿಗೆ ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *