ದಿನದ ಅಪರಾಧಗಳ ಪಕ್ಷಿನೋಟ 04ನೇ ಜನವರಿ 2020

 – ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:03.01.2020 ರಂದು  ಬೆಳಿಗ್ಗೆ 11-00 ಗಂಟೆಯಲ್ಲಿ ಅಯ್ಯಪಲ್ಲಿ ಗ್ರಾಮದ ಪಕ್ಕದಲ್ಲಿರುವ ನೀಲಗಿರಿ ತೋಪಿನಲ್ಲಿ ೧. ವಿಜಿಕುಮಾರ್‌ ಬಿನ್ ನಾರಾಯಣಪ್ಪ, ಬೇತಮಂಗಲ, ೨. ಶಂಕರ್‌ ಬಿನ್ ವೆಂಕಟಸ್ವಾಮಿ, ಕದಿರೇಗೌಡನಕೋಟೆ, ೩. ಶ್ರೀನಾಥ್‌ ಬಿನ್ ಸೀನಪ್ಪ, ಐಯ್ಯಪಲ್ಲಿ, ೪. ನಾಗಪ್ಪ ಬಿನ್ ಬೀಮಪ್ಪ, ಗಾಂಧಿನಗರ, ಕೋಲಾರ, ೫. ಹರೀಶ್ ಬಿನ್ ಶಂಕರಪ್ಪ, ಜಯಮಂಗಲ, ೬. ಮುರಳಿ ಬಿನ್ ಶ್ರೀರಾಮಪ್ಪ, ಐಯ್ಯಪಲ್ಲಿ, ೭. ಶಿವ ಬಿನ್ ಸೀನಪ್ಪ, ಐಯ್ಯಪಲ್ಲಿ  ರವರುಗಳು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್  ಜೂಜಾಟ ಆಡುತ್ತಿದ್ದವರ ಮೇಲೆ ಎ.ಎಸ್.ಐ ಶ್ರೀ. ಎನ್‌.ಪಿ ಸಿಂಗ್‌ ಮತ್ತು ಸಿಬ್ಬಂದಿಯವರು ದಾಳಿ ನೆಡೆಸಿ ಆರೋಪಿಗಳನ್ನು ಮತ್ತು 4,800/- ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಬೈಚಪ್ಪ, ಅಬ್ಬಗಿರಿಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮನಾದ ಕೃಷ್ಣಪ್ಪ, 30 ವರ್ಷ ರವರು ದಿನಾಂಕ 23.12.2019 ರಂದು ಬೆಳಿಗ್ಗೆ ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *