ದಿನದ ಅಪರಾಧಗಳ ಪಕ್ಷಿನೋಟ 04ನೇ ಅಕ್ಟೋಬರ್‌ 2019

  – ಸಾಧಾರಣ ಕಳ್ಳತನ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಯಪ್ಪ ಬಿನ್ ರಾಮಪ್ಪ, ಶೆಟ್ಟಿಕುಂಟೆ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 03-10-2019 ರಂದು  ಕೆ.ಜಿ.ಎಪ್ ಗೆ ದ್ವಿಚಕ್ರ ವಾಹನದಲ್ಲಿ ಹೋಗಿ ಬ್ಯಾಂಕ್ ನಲ್ಲಿ 5,00,000 ಹಣವನ್ನು ಡ್ರಾ ಮಾಡಿ  ದ್ವಿಚಕ್ರ ವಾಹನದ  ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಒಂದು ಕವರ್ ನಲ್ಲಿ ಸುತ್ತಿ ಇಟ್ಟು, ಕ್ಯಾಸಂಬಳ್ಳಿ ಕರ್ನಾಟಕ ಗ್ರಾಮೀಣಾ ಬ್ಯಾಂಕ್ ಗೆ ಮದ್ಯಾಹ್ನ 2.45 ಗಂಟೆಗೆ ಹೋಗಿ, 5,00,000 ಹಣದಲ್ಲಿ 2,00,000 ತೆಗೆದು ಕೊಂಡು ಉಳಿದ ಹಣ ಅಲ್ಲೇ ಬಿಟ್ಟು ಬಾಕ್ಸ್ ಲಾಕ್ ಮಾಡಿಕೊಂಡು, ಬ್ಯಾಂಕ್ ಒಳಗಡೆ ಹೋಗಿ  ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ದ್ವಿ ಚಕ್ರ ವಾಹನದ   ಪ್ಲಾಸ್ಟಿಕ್ ಬಾಕ್ಸ್ ನ್ನು ತೆರೆದು ಅದರಲ್ಲಿ ಇದ್ದ  3,00,000 ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ಅಕ್ರಮ ಮದ್ಯ ಮಾರಾಟ : 01

ಅಪರಾಧ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮದ್ಯಮಾರಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.03.10.2019 ರಂದು  ದೂರುದಾರರಾದ ಶ್ರೀ. ಚಲಪತಿ ಮುಖ್ಯ ಪೇದೆ ರವರು ಗಸ್ತಿನಲ್ಲಿದ್ದಾಗ ಬಂದ ಮಾಹಿಯ ಮೇರೆಗೆ ರಾಬರ್ಟ್ ಸನ್‌ಪೇಟೆಯ  ಮಿನಿ ಇಬ್ರಾಹಿಂ ರಸ್ತೆ  2 ನೇ ಎಂ.ಜಿ ಮಾರ್ಕೆಟೆಯ ದನದ ಮಾಂಸದ ಹೋಟೆಲ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸರಸ ಎಂಬುವರು ವ್ಯಕ್ತಿಗಳಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಕಲ್ಪಿಸಿರುವುದಾಗಿ ಬಂದ ಮಾಹಿತಿಯ ಮೇರೆಗೆ ಪಂಚರೊಂದಿಗೆ ದಾಳಿನಡೆಸಿ ಮದ್ಯಪಾನ ಸೇವನೆ ಮಾಡಲು ತಂದಿಟ್ಟಿದ್ದ 90 ಮಿಲಿ ಪಾಕೆಟ್ಗಳನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.

 – ಇತರೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.03.10.2019 ರಂದು ಮಧ್ಯಾಹ್ನ 01.30 ಗಂಟೆಯಲ್ಲಿ ಕಾರ್ತಿಕ್‌, ಜಯಪಾಲ್, ಷಣ್ಮುಗಂ, ಜಾ‌ನ್‌ ಮತ್ತು  ಜರ್‍ಮನ್‌ ಜೇಮ್ಸ್‌ ರವರು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ಕಾಂಪೌಂಡ್ ನೊಳಗೆ ಠಾಣೆಯ ಮುಂದೆ ಒಬ್ಬರಿಗೊಬ್ಬರು ಬೈದಾಡಿ, ಕೈ ಮಿಲಾಯಿಸಿಕೊಂಡು ಹೊಡೆದಾಡಲು ಪ್ರಾರಂಭಿಸಿದ್ದರಿಂದ ಠಾಣಾ ಪಹರೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೆಬಲ್‌ ಶ್ರೀಮತಿ. ಅನುರಾಧ,  ರವರು ದೂರು ನೀಡಿರುತ್ತಾರೆ.

 – ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಗೀತಾ, ದೇಶಿಹಳ್ಳಿ, ಬಂಗಾರಪೇಟೆ ರವರ ಗಂಡ ರಾಜು, 48 ವರ್ಷ ರವರು ಅತಿಯಾದ ಮದ್ಯಪಾನ ಹಾಗು ಜಾಂಡೀಸ್ ಖಾಯಲೆಯಿಂದ ಗುಣ ಮುಖವಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 03.10.2019 ರಂದು ಬೆಳಿಗ್ಗೆ 08-30 ಗಂಟೆಯಿಂದ  ಸಂಜೆ 4-00 ಗಂಟೆಯ ಮದ್ಯೆ ಮನೆಯಲ್ಲಿ ಯಾರೂ ಇಲ್ಲದಾಗ, ಸೀರೆಯಿಂದ ಕಬ್ಬಿಣದ ಪೈಪಿಗೆ  ನೇಣು ಹಾಕಿಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *