ದಿನದ ಅಪರಾಧಗಳ ಪಕ್ಷಿನೋಟ 04ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 03.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ.03.03.2021 ರಂದು ಮದ್ಯಾಹ್ನ 1:30 ಗಂಟೆಗೆ ಪಾರಾಂಡಹಳ್ಳಿಯ ಉದಯನಗರದ ಬಳಿ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಪಂಚಾಯಿತಿ ಕಛೇರಿ ಮುಂಭಾಗದ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ವಿನೋದ್ ಮತ್ತು ಬಾಬು, ಕೊಮ್ಮೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮದ್ಯಸೇವನೆ ಮಾಡುತ್ತಿದ್ದವರನ್ನು ದೂರುದಾರರಾದ ಶ್ರೀ. ಮಂಜುನಾಥ, ಸಿ.ಹೆಚ್.ಸಿ  ರವರು ಹಿಡಿದು ಸ್ಥಳದಲ್ಲಿದ್ದ (1) 3 ಪ್ಲಾಸ್ಟಿಕ್ ಲೋಟ, (2) ಮೂರು 90 ಎಂ.ಎಲ್ ನ  ORIGINAL CHOICE TETRA POCKET, (3) 5 ವಾಟರ್ ಪಾಕೇಟ್ ಗಳಿದ್ದು 2 ವಾಟರ್ ಪಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ.03.03.2021 ರಂದು ಮದ್ಯಾಹ್ನ 2:30 ಗಂಟೆಗೆ ಪೊಟ್ಟೆಪಲ್ಲಿ ಜನತಾ ಮನೆಗಳ ಹೊರವಲಯದ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ರವಿ, ಕೊಮ್ಮೇನಹಳ್ಳಿ ಗ್ರಾಮ ಮತ್ತು ರಘು ನೀಲಗಿರಿಪಲ್ಲಿ ಗ್ರಾಮ ರವರು ಮದ್ಯಸೇವನೆ ಮಾಡುತ್ತಿದ್ದವರನ್ನು ದೂರುದಾರರಾದ ಶ್ರೀ. ಗಜೇಂದ್ರ, ಸಿ.ಹೆಚ್.ಸಿ ರವರು ಹಿಡಿದು ಸ್ಥಳದಲ್ಲಿದ್ದ (1) 3 ಪ್ಲಾಸ್ಟಿಕ್ ಲೋಟ, (2) ಮೂರು 90 ಎಂ.ಎಲ್ ನ  ORIGINAL CHOICE TETRA POCKET (3) 5 ವಾಟರ್ ಪಾಕೇಟ್ ಗಳಿದ್ದು 2 ವಾಟರ್ ಪಾಕೇಟ್ ಗಳು ಖಾಲಿಯಾಗಿರುವುದನ್ನು ವಶಪಡಿಸಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಸೊಣ್ಣಪ್ಪ, ಸೋರೇಗೌಡನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಜಮೀನಿನಲ್ಲಿ ದಿನಾಂಕ 03.03.2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಚಲಪತಿ ರವರು ಕುರಿಗಳನ್ನು ಮೇಯಿಸುತ್ತಿದ್ದು, ದೂರುದಾರರ ಹೆಂಡತಿ ಶ್ರೀಮತಿ ಸುಶೀಲಮ್ಮ ರವರು ಕೇಳಿದ್ದಕ್ಕೆ ಗಲಾಟೆ ಮಾಡಿ, ಕೋಲಿನಿಂದ ಹೊಡೆದು ಗಾಯವನ್ನುಂಟುಮಾಡಿರುತ್ತಾರೆ. ದೂರುದಾರರು ಕೇಳಿದಕ್ಕೆ ದೂರುದಾರರೊಂದಿಗೂ ಸಹ ಗಲಾಟೆ ಮಾಡಿ, ಚಲಪತಿ ಮತ್ತು ಪಿಳ್ಳಪ್ಪ ರವರು ಕೋಲಿನಿಂದ ಹೊಡೆದು, ಹಲ್ಲಿಂದ ಕಚ್ಚಿ ರಕ್ತಗಾಯವನ್ನುಂಟು ಮಾಡಿ, ಪ್ರಾಣಬೆದರಿಕೆ ಹಾಕಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಆಂಡ್ರಸನ್‌ಪೇಟೆ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಭಾಸ್ಕರ್‌ ರೆಡ್ಡಿ ಬಿನ್ ವಿನಾಯಕರೆಡ್ಡಿ, ಲಕ್ಷ್ಮೀಸಾಗರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ ವಿನಾಯಕರೆಡ್ಡಿ, 47 ವರ್ಷ ರವರು ಮಧ್ಯಪಾನ ಮಾಡುವ  ಹವ್ಯಾಸ ಬೆಳೆಸಿಕೊಂಡು,  ದಿನಾಂಕ 02.03.2021 ರಂದು ರಾತ್ರಿ ಮಧ್ಯಪಾನ ಮಾಡಿ ರಾತ್ರಿ 8.00 ಗಂಟೆಯಿಂದ ದಿನಾಂಕ 03.03.2021  ರಂದು ಬೆಳಿಗ್ಗೆ 6.00  ಗಂಟೆಯ ಮಧ್ಯೆ ರಾಜಪೇಟೆ  ರಸ್ತೆಯಲ್ಲಿರುವ ಶ್ರೀ ರಾಜಾ ವೈನ್ಸ್ ನ ಹಿಂಭಾಗದಲ್ಲಿರುವ  ಕಾಲುವೆ ರೀತಿಯಲ್ಲಿದ್ದ ಗುಣಿಯ ಕಡೆ ಹೋಗಿ, ಗುಣಿ ಒಳಗೆ ಬಿದ್ದು ಮೃತಪಟ್ಟಿರುತ್ತಾನೆ.

Leave a Reply

Your email address will not be published. Required fields are marked *