ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 03.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಜೇಂದ್ರ ನಾಯ್ಡು ಬಿನ್ ವಿಭೂಷನಮ್, ಗೋಣಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 03.02.2021 ರಂದು ಸಂಜೆ 5.15 ಗಂಟೆಯಲ್ಲಿ ಪವನ್ ರಾಜ್ ರವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ, ದೂರುದಾರರನ್ನು ಕಂಡು ಪವನ್ ರಾಜ್ “ಕಳ್ಳರ ಬದುಕು ಇಷ್ಟೇ” ಎಂದು ಹೇಳಿದಾಗ ದೂರುದಾರರು ಏಕೆ ಈ ರೀತಿ ಹೇಳುತ್ತೀಯ ಎಂದು ಕೇಳಿದ್ದಕ್ಕೆ, ಕಬ್ಬಿಣದ ಕಂಬಿಯಿಂದ ದೂರುದಾರರಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ.