ದಿನದ ಅಪರಾಧಗಳ ಪಕ್ಷಿನೋಟ 04ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 04.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 03

             ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ 3 ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ

         ದಿನಾಂಕ 28.11.2020 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಮಂಜುನಾಥ್, ಅಬ್ಬಿಗಿರಿಹೊಸಹಳ್ಳಿ ಗ್ರಾಮ ರವರು ತನ್ನ ದ್ವಿಚಕ್ರ ವಾಹನ ಹೀರೋಹೋಂಡಾ ಪ್ಯಾಷನ್ ಪ್ರೋ ಸಂಖ್ಯೆ ಕೆಎ-07-ಕೆ-6628 ನ್ನು ಬಂಗಾರಪೇಟೆಯ ವಿನಾಯಕ ಬಾರ್ ಹಿಂಭಾಗ ನಿಲ್ಲಿಸಿದ್ದ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

      ದಿನಾಂಕ 25.11.2020 ರಂದು ಮದ್ಯಾಹ್ನ ಸುಮಾರು 12.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಬೀರಪ್ಪ, ಕೆಸರನಹಳ್ಳಿ ಗ್ರಾಮ ಬಂಗಾರಪೇಟೆ ರವರು ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-08-ಜೆ-6744 ನ್ನು ಬಂಗಾರಪೇಟೆಯ ಬಜಾರ್ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಮೂತ್ರ ವಿಸರ್ಜನೆಯ ಬಿಲ್ಡಿಂಗ್ ಪಕ್ಕದಲ್ಲಿ ನಿಲ್ಲಿಸಿ, ಬಜಾರ್ ರಸ್ತೆಯಲ್ಲಿರುವ ವೀರಭದ್ರಸ್ವಾಮಿ ಪ್ರಾವಿಷನ್ ಸ್ಟೋರ್ ನಲ್ಲಿ ಮನೆಯ ಸಾಮಗ್ರಿಗಳನ್ನು ತೆಗೆದುಕೊಂಡು ಮದ್ಯಾಹ್ನ ಸುಮಾರು 3.00 ಗಂಟೆಗೆ ವಾಪಸ್ಸು ದ್ವಿಚಕ್ರ ವಾಹನದ ಬಳಿ ಹೋಗಿ ನೋಡಿದಾಗ ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-08-ಜೆ-6744, ಬೆಲೆ ಸುಮಾರು 35,000/-ರೂ ಬಾಳುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

           ದಿನಾಂಕ 20.11.2020 ರಂದು ಬೆಳಿಗ್ಗೆ ಸುಮಾರು 7.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಮುರಳಿ, ಮಾವಹಳ್ಳಿ ಬಡಾವಣೆ ಬಂಗಾರಪೇಟೆ ರವರು ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-07-ಕ್ಯೂ-7752 ನ್ನು ಬಂಗಾರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿ, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಮದ್ಯಾಹ್ನ ಸುಮಾರು 12.00 ಗಂಟೆಗೆ ಸದರಿ ದೇವಸ್ಥಾನದ ಆವರಣದಲ್ಲಿರುವ ತೊಟ್ಟಿಯಲ್ಲಿ ನೀರನ್ನು ತೆಗೆದುಕೊಂಡು ಬರಲು ಹೋಗಿದ್ದಾಗ, ಪಿರ್ಯಾದಿದಾರರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-07-ಕ್ಯೂ-7752 ಬೆಲೆ ಸುಮಾರು 30,000/-ರೂ ಬಾಳುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

     ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 28.11.2020 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ಹರೀಶ್, ೨೪ ವರ್ಷ, ಬನಹಳ್ಳಿ ಗ್ರಾಮ ಹಾಗೂ ಅವರ ಚಿಕ್ಕಮ್ಮಳಾದ ರಾಧ ರವರು ಹಾಗೂ ಆಕೆಯ ಮಗನಾದ ಜೀವನ್ ಎಂಬುವರು ಬನಹಳ್ಳಿ ಗ್ರಾಮದಿಂದ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ದ್ವಿಚಕ್ರ ವಾಹನ ಸಂಖ್ಯೆ ಕೆಎ-01-ಡಬ್ಲ್ಯೂ-3682 ರಲ್ಲಿ ಪಿರ್ಯಾದಿದಾರರು ದ್ವಿಚಕ್ರ ವಾಹನವನ್ನು ಚಲಾಯಿಸುತ್ತಾ, ಹಿಂಬದಿಯಲ್ಲಿ ರಾಧ & ಜೀವನ್ (1ವರ್ಷ, 8 ತಿಂಗಳು) ರವರು ಕುಳಿತುಕೊಂಡಿದ್ದು ತುಮಟಗೆರೆ ಸಮೀಪವಿರುವ ಇಟ್ಟಿಗೆ ಪ್ಯಾಕ್ಟರಿ ಸಮೀಪ ಚಲಾಯಿಸಿಕೊಂಡು ಬರುತ್ತಿದ್ದಾಗ, ಹಿಂಬದಿಯಿಂದ ಮಾರುತಿ ಓಮಿನಿ ಕಾರ್ ಸಂಖ್ಯೆ ಕೆಎ-04-ಎಂಎಲ್-7154 ನ್ನು ಅದರ ಚಾಲಕನು ಯಾವುದೇ ಮುನ್ಸೂಚನೆ ಇಲ್ಲದೇ ಸಡನ್ ಆಗಿ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ್ದರಿಂದ ಪಿರ್ಯಾದಿಯು ದ್ವಿಚಕ್ರ ವಾಹನವನ್ನು ಎಡಕ್ಕೆ ತೆಗೆದುಕೊಂಡಾಗ, ಸದರಿ ಕಾರ್ ನ ಚಾಲಕ ಕಾರ್ ನ್ನು ಎಡಭಾಗಕ್ಕೆ ತಿರುಗಿಸಿದ್ದರಿಂದ ದ್ವಿಚಕ್ರ ವಾಹನವು ಓಮಿನಿ ಕಾರ್ ಗೆ ತಗುಲಿ ವಾಹನ ಸಮೇತ ಕೆಳಗೆ ಬಿದ್ದಾಗ, ಪಿರ್ಯಾದಿಗೆ ಬಲತೋಳಿನ ಮೇಲೆ, ಎಡಗಾಲು & ಬಲಗಾಲಿಗೆ ತರಚಿದ ಗಾಯಗಳಾಗಿರುತ್ತದೆ. ರಾಧ ರವರಿಗೆ ತಲೆಯ ಹಿಂಭಾಗ ರಕ್ತಗಾಯ ಹಾಗೂ ಬಲಮೊಣಕಾಲಿಗೆ, ಎಡಗೈಗೆ ರಕ್ತಗಾಯ, ತರಚಿದ ಗಾಯಗಳಾಗಿರುತ್ತದೆ. ಜೀವನ್ ರವರಿಗೆ ಏನೂ ಗಾಯಗಳಾಗಿರುವುದಿಲ್ಲ. ನಂತರ ಸದರಿ ಕಾರ್ ನ ಚಾಲಕನು ಗಾಯಾಳುಗಳನ್ನು ಚಿಕಿತ್ಸೆಗೆ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಆಸ್ಪತ್ರೆಯಲ್ಲಿ ಬಿಟ್ಟು ಕಾರ್ ಸಮೇತ ಪರಾರಿಯಾಗಿರುತ್ತಾನೆ.

Leave a Reply

Your email address will not be published. Required fields are marked *