ದಿನದ ಅಪರಾಧಗಳ ಪಕ್ಷಿನೋಟ 04ನೇ ಡಿಸೆಂಬರ್‌ 2020

ದಿನಾಂಕ 03.12.2020 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 04.12.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ರಮೇಶ್ ಬಿನ್ ವೆಂಕಟೇಶಪ್ಪ, ಹುದುಕುಲ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 03.12.2020 ರಂದು ಬೆಳಿಗ್ಗೆ 8.45 ಗಂಟೆಯಲ್ಲಿ ರಾಜಪ್ಪ ರವರೊಂದಿಗೆ ಹುದುಕುಳ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬಣ್ಣ ಬಳಿಯುತ್ತಿದ್ದಾಗ, ಅಶ್ವತಪ್ಪ ರವರ ಮೊಮ್ಮಗನಾದ ಭುವನ್ ಎಂಬ ಹುಡುಗ ಅಲ್ಲಿಗೆ ಬಂದಿದ್ದು, ಬಣ್ಣ ಬೀಳಬಹುದೆಂದು, ದೂರ ಹೋಗುವಂತೆ ದೂರುದಾರರು ಭುವನ್ ರವರಿಗೆ ತಿಳಿಸಿರುತ್ತಾರೆ. ನಂತರ ಬಣ್ಣದ ಬಕೆಟ್ ಗಳನ್ನುತೊಳೆದು ಆ ನೀರನ್ನು ರಸ್ತೆಯ ಕಡೆ ಚೆಲ್ಲಿದಾಗ, ಆಕಸ್ಮಿಕವಾಗಿ ಭುವನ್ ರವರ ಮೇಲೆ ಬಿದ್ದಿರುತ್ತದೆ. ಆಗ ಇದನ್ನು ಕಂಡು ಅಶ್ವತಪ್ಪ ಮತ್ತು ವಿನೋದ್ ರವರು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ದೊಣ್ಣೆ ಮತ್ತು ಕಂಬಿಯಿಂದ ಹೊಡದು ರಕ್ತಗಾಯಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ಅಶ್ವತಪ್ಪ ಬಿನ್ ಲಕ್ಷ್ಮಯ್ಯ, ಹುದುಕುಲ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮೊಮ್ಮ ಭುವನ್ ರವರು ದಿನಾಂಕ 03.12.2020 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ಹುದುಕುಳ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಆಟವಾಡುತ್ತಿದ್ದಾಗ, ರಮೇಶ್ ಮತ್ತು ಶ್ರೀನಿವಾಸ ರವರು ಭುವನ್ ರವರ ಮೇಲೆ ಬಣ್ಣ ಹಾಕಿ, ಕೆಟ್ಟ ಮಾತುಗಳಿಂದ ಬೈದಿದ್ದು, ದೂರುದಾರರು ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲು ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

ಮನುಷ್ಯ ನಾಪತ್ತೆ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮೀ ಕೊಂ ವೆಂಕಟೇಶಲು, ಎಸ್.ಜಿ. ಕೋಟೆ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕು||ತೇಜಸ್ವಿನಿ.ವಿ, 20 ವರ್ಷ ರವರು ದಿನಾಂಕ 02.12.2020 ರಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿಗೆ ಹೋದವರು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣದ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಶೀಶ್‌ ಮೆಲ್ವಿನ್, ಬೆಮೆಲ್ ಕ್ವಾಟ್ರಸ್‌, ಬೆಮೆಲ್ ನಗರ, ಕೆ.ಜಿ.ಎಫ್ ರವರ ತಾಯಿ ಶ್ರೀಮತಿ. ಮೇರಿ ಮಂಜುಳ, 58 ವರ್ಷ ರವರು ದಿನಾಂಕ 03-12-2020 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಮನೆಯಲ್ಲಿ ಬಾಟಲ್ನಲಿಟ್ಟಿದ್ದ ಆಸಿಡ್ ಅನ್ನು ಕುಡಿಯುವ ನೀರೆಂದು ತಿಳಿದುಕೊಂಡು ಆಕಸ್ಮಿಕವಾಗಿ ಕುಡಿದಿದ್ದು, ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಮೇರಿ ಮಂಜುಳ ರವರು ದಿನಾಂಕ 03-12-2020 ಮಧ್ಯಾಹ್ನ 2-55 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *