ದಿನದ ಅಪರಾಧಗಳ ಪಕ್ಷಿನೋಟ 04ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  03.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಕೊಲೆ ಪ್ರಯತ್ನ :  01

       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.08.2020 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಮುನಿರಾಜಪ್ಪ, ತಮ್ಮೇನಹಳ್ಳಿ ಗ್ರಾಮ ರವರು ಮನೆಯ ಮುಂದೆ ನೀರು ಹೋಗಲು ಕಾಲುವೆಯನ್ನು ತೆಗೆದಿದ್ದು ಆರೋಪಿಗಳಾದ ವೆಂಕಟೇಶ, ರಾಜಪ್ಪ ಮತ್ತು ಲಕ್ಷ್ಮಮ್ಮ ರವರು ಸದರಿ ಕಾಲುವೆಗೆ ಅಡ್ಡಲಾಗಿ ಕಲ್ಲುಗಳನ್ನು ಹಾಕುತ್ತಿದ್ದಾಗ, ಇದನ್ನು ಪಿರ್ಯಾದಿ ಕೇಳಿದಕ್ಕೆ,  ಆರೋಪಿಗಳು ಕೆಟ್ಟ ಮಾತುಗಳಿಂದ ಬೈದು, ಜಗಳ ಮಾಡುತ್ತಿದ್ದಾಗ, ಪಿರ್‍ಯಾದಿಯ ಮಗಳಾದ ವೀಣಾ ರವರು ಸ್ಥಳಕ್ಕೆ ಬಂದು ಆರೋಪಿ ಲಕ್ಷ್ಮಮ್ಮ ರವರನ್ನು ಕುರಿತು ‘ಮರ್ಯಾದೆಯಿಂದ ಮಾತನಾಡಿ’ ಎಂದು ಹೇಳಿದಾಗ ಆರೋಪಿ ವೆಂಕಟೇಶ ರವರು ಮನೆಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ಬಂದು ನಮ್ಮ ತಂಟೆಗೆ ಬಂದರೆ ಯಾರನ್ನು ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಯೇ ವಿಣಾ ರವನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚನಿಂದ ಕತ್ತಿನ ಹಿಂಭಾಗ ಹೊಡೆದು ಮಾರಣಾಂತಿಕ ಹಲ್ಲೆಯನ್ನು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಪಿರ್ಯಾದಿಯವರಿಗೂ ಮತ್ತು ಆರೋಪಿಗಳಿಗೆ ಸುಮಾರು ವರ್ಷಗಳಿಂದ ಆಸ್ತಿಯ ವಿಚಾರದಲ್ಲಿ ಗಲಾಟೆಗಳಾಗಿ ಹಳೆದ್ವೇಷದ ಕಾರಣ ಈ ಮಾರಣಾಂತಿಕ ಹಲ್ಲೆಯನ್ನು ಮಾಡಿರುತ್ತಾರೆ.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರಾಧಾ ಕೊಂ ನಾರಾಯಣಸ್ವಾಮಿ, ಕೊತ್ತೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಜಮೀನಿನಲ್ಲಿ ದಿನಾಂಕ 02.08.2020 ರಂದು 3.00 ಗಂಟೆಗೆ ಪೆರಿಯಪ್ಪ ಬಿನ್ ತೋಳನಾಗಪ್ಪ, ಮಲ್ಲಪ್ಪ ಬಿನ್ ಪೆರಿಯಪ್ಪ, ಮುನಿಯಪ್ಪ ಬಿನ್  ಮಲ್ಲಪ್ಪ ರವರು ದೌರ್ಜನ್ಯದಿಂದ  ಬೇಲಿಯನ್ನು ಕಿತ್ತು ಹಾಕಿದ್ದು, ದೂರುದಾರರು ಕೇಳಿದ್ದಕ್ಕೆ ಕೆಟ್ಟಮಾತುಯಗಳಿಂದ  ಬೈದು, ದೊಣ್ಣೆಯಿಂದ ಹೊಡೆದಿರುತ್ತಾರೆ.

Leave a Reply

Your email address will not be published. Required fields are marked *