ದಿನದ ಅಪರಾಧಗಳ ಪಕ್ಷಿನೋಟ 03 ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 02.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಾಧುರಿ ಕೊಂ ಗುಣಶೇಖರ್ ರೆಡ್ಡಿ, ಲಕ್ಷ್ಮೀಸಾಗರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ: 02-07-2018 ರಂದು ಮಧ್ಯಾಹ್ನ 03.45 ಗಂಟೆಗೆ ತೋಟದ ಬಳಿ ಹೋಗುತ್ತಿದ್ದಾಗ, ಆರೋಪಿ ವೆಂಕಟೇಶಪ್ಪ ಹಿಂಬಾಲಿಸಿಕೊಂಡು ಹೋಗಿ ಕೆಟ್ಟ ಮಾತುಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

– ಹಲ್ಲೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜಪ್ಪ ಬಿನ್ ಕೃಷ್ಣಪ್ಪ, ಲಕ್ಷ್ಮೀಸಾಗರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮನಾದ ಕೆ.ವೆಂಕಟೇಶ್ ಎಂಬುವರು ದಿನಾಂಕ:02-07-2018 ರಂದು ಸಂಜೆ 4-00 ಗಂಟೆಯಲ್ಲಿ ಜಮೀನಿನಲ್ಲಿ ಕಳ್ಳೆ ಬೀಜ ಬಿತ್ತನೆ ಮಾಡುತ್ತಿರುವಾಗ, ಅದೇ ಗ್ರಾಮದ ಸುಬ್ರಮಣ್ಯರೆಡ್ಡಿ, ಗುಣಶೇಖರರೆಡ್ಡಿ ಮತ್ತು ಮಂಜುನಾಥರೆಡ್ಡಿ ರವರು ಗೆನಿಮೆಯನ್ನು ಉಳುಮೆ ಮಾಡಿದ್ದು, ಇದನ್ನು ವೆಂಕಟೇಶ್‌ ರವರು ಕೇಳಿದ್ದಕ್ಕೆ ಮೂರು ಜನರು ಕೆಟ್ಟ ಮಾತುಗಳಿಂದ ಬೈದು, ಹೊಡೆದು ರಕ್ತಗಾಯಪಡಿಸಿ, ಪ್ರಾಣಬೆದರಿಗೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ : 02
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಶ್ರೀನಿವಾಸಪ್ಪ, ಪಿ.ಸಿ ೨೯೯, ಬಂಗಾರಪೇಟೆ ಪೊಲೀಸ್ ಠಾಣೆಯ ರವರು ನೀಡಿದ ದೂರಿನಲ್ಲಿ, ದಿನಾಂಕ:02.07..2018 ರಂದು ಮಧ್ಯಾಹ್ನ 12.30 ಗಂಟೆಯಲ್ಲಿ ಯಾರೋ ಒಬ್ಬ ಸುಮಾರು 35-40 ವರ್ಷ ವಯಸ್ಸುಳ್ಳ ಅನಾಮಧೇಯ ಗಂಡಸು ಬಂಗಾರಪೇಟೆಯ ಬಜಾರ್ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಪಾರ್ಕ್ ಬಳಿ ಊಟವನ್ನು ಸೇವಿಸದೆ ಅಥವಾ ಯಾವುದೋ ಖಾಯಿಲೆಯಿಂದ ನರಳಿ ನಿಶ್ಯಕ್ತನಾಗಿ ಬಿದ್ದು ಮೃತಪಟ್ಟಿರುತ್ತಾನೆ.

ದೂರುದಾರರಾದ ಶ್ರೀ. ಮಂಜುನಾಥ ಬಿನ್ ವೆಂಕಟೇಶಪ್ಪ, ಜುಂಜನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ವೆಂಕಟೆಶಪ್ಪ, 60  ವರ್ಷ ರವರಿಗೆ ಸುಮಾರು 06 ತಿಂಗಳಿಂದ ಹೊಟ್ಟೆ ನೋವಿನ ಬಾಧೆ ಇದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಿರುವುದಿಲ್ಲ. ದಿನಾಂಕ:01.07.2018 ರಂದು ಸಂಜೆ 4.30 ಗಂಟೆಯಲ್ಲಿ ವೆಂಕಟೇಶಪ್ಪ ರವರು ಹೊಟ್ಟೆ ನೋವಿನ ಬಾಧೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಮೇಲ್ಛಾವಣಿಗೆ ಅಳವಡಿಸಿದ್ದ ಕೊಕ್ಕೆಯೊಂದಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

– ಅಬಕಾರಿ ಕಾಯ್ದೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:02.07.2018 ರಂದು ಬೆಳಿಗ್ಗೆ 8.50 ಗಂಟೆಯಲ್ಲಿ ಕಂಗನಲ್ಲೂರು ಗ್ರಾಮದ ದ್ಯಾವರಮ್ಮ ನೀಲಗಿರಿ ತೋಪಿನಲ್ಲಿ ಮಂಜುನಾಥ ಬಿನ್ ನಾರಾಯಣಪ್ಪ, 47 ವರ್ಷ, ವಕ್ಕಲೀಗ ಜನಾಂಗ, ವಾಸ- ಕಂಗನಲ್ಲೂರು ಗ್ರಾಮ, ಕೆ.ಜಿ.ಎಪ್ ತಾಲ್ಲೂಕು ಎಂಬಾತನು THREE ACES WHISKY ನ 20 ಮಧ್ಯದ ಪಾಕೆಟ್‌ಗಳನ್ನು ಇಟ್ಟುಕೊಂಡು ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವನ್ನು  ಬೇತಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ಹೊನ್ನೇಗೌಡ ಮತ್ತು ಸಿಬ್ಬಂದಿಯವರು ಹಿಡಿದು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *