ದಿನದ ಅಪರಾಧಗಳ ಪಕ್ಷಿನೋಟ 03 ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:02.09.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 02.09.2019 ರಂದು ಮದ್ಯಾಹ್ನ ಸುಮಾರು 2.30 ಗಂಟೆಯಲ್ಲಿ ದೂರುದಾರರು ಮುನಿಯಪ್ಪ, ಬುಡಗಾನಹಳ್ಳಿ ಗ್ರಾಮ ಬಂಗಾರಪೇಟೆ ರವರು ತನ್ನ ದ್ವಿಚಕ್ರ ವಾಹನ ಟಿವಿಎಸ್ ಎಕ್ಸೆಲ್ ಸೂಪರ್ ಹೆವಿ ಡ್ಯೂಟಿ ಸಂಖ್ಯೆ ಕೆಎ-08-ಕೆ-4856 ರ ಹಿಂಬದಿಯಲ್ಲಿ ಹೆಂಡತಿ ಭಾರತಮ್ಮ ರವರನ್ನು ಕುಳ್ಳರಿಸಿಕೊಂಡು, ಮರಾಠಾ ಹೊಸಹಳ್ಳಿ-ಬೂದಿಕೋಟೆ ಮುಖ್ಯ ರಸ್ತೆಯಲ್ಲಿ ಎಡಬದಿಯಲ್ಲಿ ಬರುತ್ತಿದ್ದಾಗ, ಬೂದಿಕೋಟೆ ಕಡೆಯಿಂದ ಆರೋಪಿಯು ದ್ವಿಚಕ್ರ ವಾಹನ ಟಿವಿಎಸ್ ಸ್ಕೂಟಿ ಜೆಸ್ಟ್ ಸಂಖ್ಯೆ ಕೆಎ-07-ಇಸಿ-0258 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಪಿರ್ಯಾದಿದಾರರ ದ್ವಿಚಕ್ರ ವಾಹನ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ, ಪಿರ್ಯಾದಿ ಮತ್ತು ಆತನ ಹೆಂಡತಿ ಭಾರತಮ್ಮ ಇಬ್ಬರೂ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ, ಪಿರ್ಯಾದಿಗೆ ಎಡಗೈ ಮೊಣಕೈ ಬಳಿ, ಎಡಗಾಲಿಗೆ ತರಚಿದ ಹಾಗೂ ಊತಗಾಯಗಳಾಗಿರುತ್ತದೆ. ಹಿಂಬದಿಯಲ್ಲಿ ಕುಳಿತಿದ್ದ ಭಾರತಮ್ಮ ರವರಿಗೆ ಬಲಕಣ್ಣು ಬಳಿ, ಬಲಭುಜದ ಮೇಲೆ ರಕ್ತಗಾಯಗಳಾಗಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕಲಾವತಿ, ಕೆನಡೀಸ್ ಲೈನ್, ಉರಿಗಾಂ, ಕೆ.ಜಿ.ಎಫ್ ರವರ ಮಗ 26 ವರ್ಷದ ಶ್ರೀ ರಾಸ್ @ ರಾಜನ್ ಎಂಬಾತನಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಮಕ್ಕಳಾಗದ ಕಾರಣ ಆಗಾಗ ತನ್ನ ಹೆಂಡತಿ ಜೊತೆಯಲ್ಲಿ ಜಗಳ ಮಾಡುತ್ತಿದ್ದು, ದಿನಾಂಕ:02.09.2019 ರಂದು ಬೆಳಿಗ್ಗೆ ಹೆಂಡತಿ ಆಶಾ ರವರು ಗಂಡ ರಾಸ್ @ ರಾಜನ್ ರವರೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದರಿಂದ ಬೇಸರಗೊಂಡು ರಾಸ್ @ ರಾಜನ್ ದಿನಾಂಕ:02.09.2019 ಬೆಳಿಗ್ಗೆ 10.00 ಗಂಟೆಯಲ್ಲಿ ತನ್ನ ವಾಸದ ಮನೆಯ ರೂಂ ನಲ್ಲಿ ಪ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *