ದಿನದ ಅಪರಾಧಗಳ ಪಕ್ಷಿನೋಟ 03 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:02.07.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗಾರ್ಜುನ ಬಿನ್ ಪ್ರಭಾಕರ್‌, ನ್ಯೂಟೌನ್, ಬೇತಮಂಗಲ ರವರು ಒಂದೂವರೆ ವರ್ಷದ ಹಿಂದೆ ರವಿಕುಮಾರ್‌, ವಿಜಯ್‌ಕುಮಾರ್‌, ಸಿಂಗಾರವೇಲನ್, ನಾಗೇಶ್ ಮತ್ತು ವಿನಯ್‌ಕುಮಾರ್‌ ರವರ ಬಳಿ ಕೆಲಸ ಕೊಡಿಸುವುದಾಗಿ ಹಣವನ್ನು ಪಡೆದು ಕೆಲಸವನ್ನು ಕೊಡಿಸದೆ, ಹಣವನ್ನು ವಾಪಸ್ಸು ನೀಡದೇ ಇದ್ದು, ದಿನಾಂಕ 02.07.2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ದೂರುದಾರರು ಬಂಗಾರಪೇಟೆಯ PWD ಕಚೇರಿಯ ಬಳಿ ಹೋಗುತ್ತಿದ್ದಾಗ, ರವಿಕುಮಾರ್‌, ವಿಜಯ್‌ಕುಮಾರ್‌, ಸಿಂಗಾರವೇಲನ್, ನಾಗೇಶ್ ಮತ್ತು ವಿನಯ್‌ಕುಮಾರ್‌ ರವರು ದೂರುದಾರರನ್ನು ಕಂಬದ ಬಳಿ ನಿಲ್ಲಿಸಿ ಹೊಂಗೆ ಮರದ ರೆಂಬೆಗಳನ್ನು ಕಿತ್ತುಕೊಂಡು ಹೊಡೆದು ಗಾಯಪಡಿಸಿರುತ್ತಾರೆ.

– ಮೋಸ/ವಂಚನೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್‌ ಬಿನ್ ವೆಂಕಟಮುನಿ, ದೇಶಿಹಳ್ಳಿ, ಬಂಗಾರಪೇಟೆ ರವರಿಗೆ ಆರೋಪಿ ನಾಗಾರ್ಜುನ್, ನ್ಯೂಟೌನ್, ಬೇತಮಂಗಲ ರವರು ಸುಮಾರು 4 ತಿಂಗಳಿನಿಂದ ಪರಿಚಯವಾಗಿದ್ದು, ಆರೋಪಿ INNOV SOURCE SERVICE PVT LTD ನಲ್ಲಿ ಮೇನೆಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ದೂರುದಾರರಿಗೆ ಹೇಳಿದಾಗ ದೂರುದಾರರು ತನಗೆ ಕೆಲಸ ಕೊಡಿ ಎಂದು ಹೆಳಿದ್ದಕ್ಕೆ, ಆರೋಪಿ ಕೆಲಸ ಕೊಡಿಸುವುದಾಗಿ 3,25,000/- ರೂಗಳನ್ನು ಪಡೆದು ನಂತರ ಇನ್ನು ಯಾರಿಗಾದರೂ ಉದ್ಯೋಗ ಬೆಕಾದರೆ ಕೊಡಿಸುತ್ತೇನೆಂತೆ ಹೇಳಿದ್ದಕ್ಕೆ ದೂರುದಾರರ ಸ್ನೇಹಿತರಾದ ಅಸೋಕ್. ಎಸ್, ವಿನಯ ಕುಮಾರ್. ವಿ ಎಂ, ಚಿತ್ರಾಶ್ರೀ, ಮತ್ತು ಸಿಂಗಾರ ವೇಲನ್ ರವರಿಂದಲೂ 6,83,000/- ಗಳನ್ನು ಆರೋಪಿ ಪಡೆದು ಕೆಲಸವನ್ನು ಕೊಡಿಸುವುದಾಗಿ ಕಂಪನಿಯ ಐ.ಡಿ ಕಾರ್ಡ್, ಅಪಾಯಿಂಟ್‌ಮೆಂಟ್ ಲೆಟರ್, ಜಾಬ್ ಕಿಟ್ ಗಲ ನಖಲಿ ದಾಖಲೆಗಳನ್ನು ಸೃಷ್ಟಿಸಿ, ಕೆಲಸವನ್ನು ಕೊಡಿಸದೆ, ಹಣವನ್ನು ಸಹ ವಾಪಸ್ಸು ನಿಡದೇ ಮೋಸ ಮಾಡಿರುತ್ತಾರೆ.

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ವೇಲು ಬಿನ್ ಚೆನ್ನದೊರೈ, ಎಂ.ವಿ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯ ಮೇಲೆ ಕೆ.ಜಿ.ಎಫ್ ಗೆ ಬಂದು ದಿನಾಂಕ:19.06.2019 ರಂದು ಕೆಲಸಕ್ಕೆ ಹೋಗಲು ಇಂಡಿಗೋ ಏರ್‌ಲೈನ್ಸ್ ನಿಂದ ಮೇಕ್ ಮೈ ಟ್ರಿಪ್ ಆ್ಯಪ್ ಮುಖಾಂತರ ಟಿಕೆಟ್ ಬುಕ್ ಮಾಡಿದ್ದು, ಪ್ರಯಾಣದ ದಿನಾಂಕವನ್ನು ತಪ್ಪಾಗಿ ನಮೂದಿಸಿದ್ದರಿಂದ ಅದನ್ನು ಸರಿಪಡಿಸಲು ಮೇಕ್ ಮೈ ಟ್ರಿಪ್ ಆ್ಯಪ್ ನ ಕಸ್ಟಮರ್ ಕೇರ್ ನಲ್ಲಿದ್ದ ದೂರವಾಣಿ ಸಂಖ್ಯೆ 8013578848 ಗೆ ಕರೆ ಮಾಡಿದಾಗ ಅವರು 9117465555 ಮೊಬೈಲ್ ಸಂಖ್ಯೆಯನ್ನು ನೀಡಿ ನಿಮಗೆ ಒಂದು ಸಂದೇಶವನ್ನು ರವಾನಿಸುತ್ತೇನೆ ಅದನ್ನು ಪುನಃ ಈ ಮೊಬೈಲ್ ಸಂಖ್ಯೆಗೆ ರವಾನಿಸಿ ಎಂದು ಸೂಚಿಸಿದ್ದು, ಅದರಂತೆ ದೂರುದಾರರು ಕಳುಹಿಸಿದಾಗ ದೂರುದಾರರ ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ 1,00,000/- ರೂಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ.

–ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗವೇಣಿ ಕೊಂ ವೆಂಕಟೇಶ್, ಚಿಗರಾಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು 9 ವರ್ಷಗಳ ಹಿಂದೆ ಬಂಗಾರಪೇಟೆ ತಾಲ್ಲೂಕು ಮಾಕಾರಹಳ್ಳಿ ಗ್ರಾಮದ ರಾಮಪ್ಪ ರವರ ಮಗನಾದ ವೆಂಕಟೇಶ್ ರವರನ್ನು ಮದುವೆ ಮಾಡಿಕೊಂಡಿದ್ದು, ಮದುವೆ ಆದಾಗಿನಿಂದಲೂ ದೂರುದಾರರು ಚಿಗರಾಪುರ ಗ್ರಾಮದಲ್ಲಿಯೇ ವಾಸವಾಗಿದ್ದು, ಈಗ್ಗೆ 3 ವರ್ಷಗಳ ಹಿಂದೆ ಗಂಡ ಕುಡಿತದ ಅಭ್ಯಾಸ ಇದ್ದುದ್ದರಿಂದ ದೂರುದಾರರನ್ನು ಬಿಟ್ಟು ಅವರ ಗ್ರಾಮಕ್ಕೆ ಹೋಗಿರುತ್ತಾನೆ. ಪ್ರತಿದಿನ ದೂರುದಾರರ ತಮ್ಮ ಪ್ರಕಾಶ್ ರವರು ದೂರುದಾರರಿಗೆ ಗಂಡನ ಮನೆಗೆ ಹೋಗುವಂತೆ ಬೈಯುತ್ತಿದ್ದು, ದಿನಾಂಕ 01-07-2019 ರಂದು ರಾತ್ರಿ 8.00 ಗಂಟೆಯಲ್ಲಿ ದೂರುದಾರರು ಅವರ ಅಕ್ಕ ಮಂಜುಳ ರವರೊಂದಿಗೆ ತಮ್ಮ ಮನೆ ಬಳಿ ರಸ್ತೆಯಲ್ಲಿ ನಿಂತು ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ರವರಿಗೆ ಸದರಿ ವಿಚಾರವನ್ನು ಹೇಳುತ್ತಿರುವಾಗ, ಪ್ರಕಾಶ್‌ ಅಲ್ಲಿಗೆ ಬಂದು ನನ್ನ ಬಗ್ಗೆ ದೂರು ಹೇಳುತ್ತಿದ್ದೀಯ ಎಂದು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು ಕೈ ಮತ್ತು ಕುಡುಗೋಲಿನಿಂದ ಹೊಡೆದು ರಕ್ತಗಾಯಪಡಿಸಿ ಸಾಯಿಸಿ ಬಿಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ.

Leave a Reply

Your email address will not be published. Required fields are marked *