ದಿನದ ಅಪರಾಧಗಳ ಪಕ್ಷಿನೋಟ 03ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 02.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ಪಾಪಣ್ಣ, ರಾಮಸಾಗರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಬಲೋರೋ ಪಿಕಪ್ ಮಿನಿ ಟೆಂಪೋ ಸಂಖ್ಯೆ KA-08-ಎ-0425 ವಾಹನವನ್ನು ಅದೇ ಗ್ರಾಮದ ಮುರುಳಿ ರವರು ದಿನಾಂಕ01.05.2020 ರಂದು ರಾತ್ರಿ 11-45 ಗಂಟೆಯಲ್ಲಿ ಬೇತಮಂಗಲ – ವಿಕೋಟೆ ರಸ್ತೆಯ ಪಿಲ್ಲಗುಂಡ್ಲಹಳ್ಳಿ ಕ್ರಾಸ್ ಬಳಿ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ ಬೇವಿನ ಮರಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ಟೆಂಪೋ ಮುಂಬಾಗ ಜಖಂ ಆಗಿದ್ದು, ಚಾಲಕ ಮುರಳಿ ಮತ್ತು ವಾಹನದಲ್ಲಿದ್ದ ಮಹೇಶ್ ರವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ.

ಅಸ್ವಾಭಾವಿಕ ಮರಣ ಪ್ರಕರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಜುಳಾ, ನ್ಯೂ ಓರಿಯಂಟಲ್‌, ಉರಿಗಾಂ, ಕೆ.ಜಿ.ಎಫ್ ರವರಿಗೆ 4 ತಿಂಗಳ ಹಿಂದೆ ಹೆರಿಗೆಯಾಗಿದ್ದು, ಶುಶ್ರೂಷೆಯನ್ನು ಮಾಡುವ ಸಲುವಾಗಿ 2019 ನೇ ಸಾಲಿನ ಡಿಸೆಂಬರ್‌ ಮಾಹೆಯಲ್ಲಿ ದೂರುದಾರರ ತಾಯಿ 67 ವರ್ಷದ ಶ್ರೀಮತಿ. ರಾಧ ರವರು ತಮಿಳು ನಾಡಿನಿಂದ ಕೆ.ಜಿ.ಎಫ್ ಗೆ ಬಂದು ದೂರುದಾರರ ಮನೆಯಲ್ಲಿ ಇದ್ದು, ದಿನಾಂಕ:01.5.2020 ರಂದು ರಾತ್ರಿ 10.00 ಗಂಟೆಯಿಂದ 1.00 ಗಂಟೆಯ ಮದ್ಯೆ ಶ್ರೀಮತಿ ರಾಧ ರವರಿಗೆ ಹೃದಯಾಘಾತವಾಗಿ ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *