ದಿನದ ಅಪರಾಧಗಳ ಪಕ್ಷಿನೋಟ 03ನೇ ಮಾರ್ಚ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:02.03.2020 ರಂದು ಸಂಜೆ ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತೀಶ್ ಬಿನ್ ನಾರಾಯಣಸ್ವಾಮಿ, ವಟ್ಟಿಗಲ್ಲು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ   KA-08-X-8462, BAJAJ PULSAR  ದ್ವಿ ಚಕ್ರ ವಾಹನ   75,000/- ರೂ ಬೆಲೆ ಬಾಳುವುದನ್ನು ದಿನಾಂಕ 27.02.2020 ರಂದು ಬೆಳಿಗ್ಗೆ 11.00 ಗಂಟೆಗೆ ಮರಾಠಹೊಸಹಳ್ಳಿ  ಗ್ರಾಮದ ಸಮೀಪ  ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಬೀಗ ಹಾಕಿ ಹೋಟೆಲಿನಲ್ಲಿ ಊಟ ಮಾಡಿಕೊಂಡು 11.30 ಗಂಟೆಗೆ ಬಂದು ನೋಡುವಷ್ಟರಲ್ಲಿ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

– ಮೋಸ/ವಂಚನೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ನಾರಾಯಣಮ್ಮ ಕೊಂ ಸುಬ್ರಮಣಿ, ಮಹದೇವಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ 09 ತಿಂಗಳ ಹಿಂದೆ ಜ್ಯೋತಿ, ದಿನ್ನೂರು ಕ್ರಾಸ್, ಹೊಸೂರು ಬಳಿ, ತಮಿಳುನಾಡು ಎಂಬುವರು ಪರಿಚಯವಾಗಿದ್ದು, ಆಕೆಯು ದೂರುದಾರರ ಗ್ರಾಮಕ್ಕೆ ಆಗಾಗ ಬಂದು ತಾನು ಹಣಕಾಸಿನ ವ್ಯವಹಾರ ನಡೆಸುತ್ತಿರುವುದಾಗಿ ಹಾಗೂ ಬಡವರಿಗೆ ಸಾಲ ಕೊಡಿಸುವುದಾಗಿ ಹೇಳಿ, 1 ಲಕ್ಷ ಸಾಲ ಕೊಡಿಸಲು 6 ಸಾವಿರ ಠೇವಣಿ ಮಾಡಬೇಕೆಂದು ಹಾಗೂ 6 ಸಾವಿರ ಠೇವಣಿ ಮಾಡಿದರೆ 1 ತಿಂಗಳಲ್ಲಿ  1 ಲಕ್ಷ ಸಾಲ ಕೊಡಿಸುವುದಾಗಿ ದೂರುದಾರರಿಗೆ ಮತ್ತು ಅದೇ ಗ್ರಾಮದ ವಾಸಿಯಾದ ಜಿ.ಲಕ್ಷ್ಮಮ್ಮ್ಮ, ಎಸ್.ರಾಜೇಶ್ವರಿ, ಪ್ರೇಮಮ್ಮ, ಗಂಗಮ್ಮ, ಕವಿತಾ, ಜಿ.ರಾಜೇಶ್ವರಿ, ಪೆದ್ದಮಯ್ಯ, ಹಾಗೂ ಲಕ್ಷ್ಮಮ್ಮ ರವರುಗಳಿಗೆ ತಿಳಿಸಿದ್ದು, ಎಲ್ಲರೂ ಜ್ಯೋತಿ ರವರ ಮಾತನ್ನು ನಂಬಿ 8 ತಿಂಗಳ ಹಿಂದೆ ದೂರುದಾರರು  3 ಲಕ್ಷ ಸಾಲ ಪಡೆಯಲು ಸೇವಾ ಶೂಲ್ಕ ಸೇರಿ 21,000/- ರೂಗಳನ್ನು 1) ಲಕ್ಷ್ಮಮ್ಮ ರವರು 2 ಲಕ್ಷಕ್ಕೆ 14,500/-  2) ಗಂಗಮ್ಮ ರವರು 1 ಲಕ್ಷಕ್ಕೆ 8,500/-, 3) ಪೆದ್ದಮ್ಮಯ್ಯ 2 ಲಕ್ಷಕ್ಕೆ 14,500/-, 4) ಪ್ರೇಮಮ್ಮ 1 ಲಕ್ಷಕ್ಕೆ 8,500/-, 5) ಎಸ್.ರಾಜೇಶ್ವರಿ 1 ಲಕ್ಷಕ್ಕೆ 8,500/-, 6) ಆರ್.ಲಕ್ಷ್ಮಮ್ಮ ರವರು 1 ಲಕ್ಷಕ್ಕೆ 8,500/-, 7) ಜಿ.ರಾಜೇಶ್ವರಿ 5 ಲಕ್ಷಕ್ಕೆ 32,000/-, 8) ಕವಿತಾ ರವರು  2 ಲಕ್ಷಕ್ಕೆ 14,500/- ರೂಗಳನ್ನು ಜ್ಯೋತಿ ರವರಿಗೆ ನೀಡಿದ್ದು, ಜ್ಯೋತಿ ರವರು 8 ತಿಂಗಳಿಂದ  ಸಾಲವನ್ನು ನೀಡದೇ, ಕೊಟ್ಟಿರುವ ಹಣವನ್ನು ಸಹ ವಾಪಸ್ಸು ಕೊಡದೆ ಮೋಸ ಮಾಡಿರುತ್ತಾರೆ.

 

– ಇತರೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 02-03-2020 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಕಳ್ಳಿ ಕುಪ್ಪ ಗ್ರಾಮದಲ್ಲಿ ರಘುನಾಥ ಎಂಬುವರು ತಮ್ಮ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದವರನ್ನು ಮತ್ತು ಸ್ಥಳದಲ್ಲಿದ್ದ 1)180 ಎಂ,ಎಲ್ 02 BAGPIPER WHISKY ಟೆಟ್ರಾ ಪ್ಯಾಕೇಟ್ 2) 90 ML ನ 03 RAJA WHISKY  ಟೆಟ್ರಾ  ಪ್ಯಾಕೇಟ್ಸ್ 3) 90 ML ನ, 10 ORIGINAL CHOICE WHISKY ಟೆಟ್ರಾ ಪ್ಯಾಕೇಟ್ಸ್ 4) 06ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಪಿ.ಎಸ್.ಐ ಶ್ರೀ. ಸುನಿಲ್‌ಕುಮಾರ್‌ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಣ್ಣನ್ ಬಿನ್ ಮನೋಹರನ್‌, ಎಂ.ವಿ ನಗರ, ಬೆಮೆಲ್‌ ನಗರ ರವರ ತಂದೆಯಾದ ಆರ್. ಮನೋಹರನ್, 67 ವರ್ಷ ರವರಿಗೆ ಕಿಡ್ನಿ ತೊಂದರೆಯಿದ್ದುದ್ದರಿಂದ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳಲು ದಿನಾಂಕ.02-03-2020  ರಂದು ಬೆಮಲ್ ನಗರದ ಸಂಭ್ರಮ್ ಆಸ್ಪತ್ರೆಗೆ ಹೋಗಿ ಬೆಳಿಗ್ಗೆ 10-30 ಗಂಟೆಯಲ್ಲಿ ಡಯಾಲಿಸಿಸ್ ಸೆಂಟರ್ ಬಳಿ ಕುಳಿತುಕೊಂಡಿದ್ದಾಗ, ಎಲ್ಲಿಂದಲೋ ಬೆಟ್ಟದ ಜೇನುನೊಣಗಳು ಬಂದು ಆರ್.ಮನೋಹರನ್ ರವರಿಗೆ ಕಚ್ಚಿದ್ದರಿಂದ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *