ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:02.01.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 02
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋವಿಂದ ಬಿನ್ ಶ್ರೀನಿವಾಸ, ಮುಷ್ಟ್ರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿ:-01.01.2020 ಸಂಜೆ 04.00 ಗಂಟೆಯಲ್ಲಿ ಸ್ನೇಹಿತ ಮಂಜುನಾಥನನ್ನು ಡಿಸ್ಕವರ್ ದ್ವಿ ಚಕ್ರ ವಾಹನ ಸಂಖ್ಯೆ ಕೆಎ 08 ಎಸ್ 4328 ರ ಹಿಂಬಾಗ ಕುಳ್ಳರಿಸಿಕೊಂಡು ನೇರಳೆ ಕೆರೆ ಗ್ರಾಮದ ಬಳಿ ಹೋಗುತ್ತಿರುವಾಗ, ಬಂಗಾರಪೇಟೆ ಕಡೆಯಿಂದ ಟಾಟಾ ಟೆಂಪೋ ಸಂಖ್ಯೆ ಕೆಎ 03 ಸಿ 4685 ನ್ನು ಅದರ ಚಾಲಕ ವಾಹನವನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಮಂಜುನಾಥ ರವರು ದ್ವಿಚಕ್ರವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ, ರಕ್ತ ಗಾಯಗಳಾಗಿರುತ್ತೆ.
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಇಬ್ರಾಹಿಂ ಬಿನ್ ಜಾನುಸಾಹೇಬ್, ಗುಟ್ಟಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ-01-01-2020 ರಂದು ಸಂಜೆ 6.30 ಗಂಟೆಯಲ್ಲಿ ಬೇತಮಂಗಲಕ್ಕೆ ಹೋಗಲು ಪ್ಯಾಸೆಂಜರ್ ಆಟೋ ಸಂಖ್ಯೆ KA-07-9424 ರಲ್ಲಿ ಇನ್ನು 4 ಜನ ೧. ನರಸಿಂಹಪ್ಪ ಕೊತ್ತಿಂಡ್ಲು ಗ್ರಾಮ, ಆಂದ್ರಪ್ರದೇಶ್ ೨. ಸುಬ್ರಮಣಿ, ಧರ್ಮಪುರಿ ಗ್ರಾಮ, ಆಂದ್ರಪ್ರದೇಶ ಮತ್ತು ಅವರ ಕುಟುಂಬ ದವರಾದ ೩. ಶ್ರೀಮತಿ ಭದ್ರಮ್ಮ ಮತ್ತು ೪. ವೇಣು ಮಾಧವ್ ರವರೊಂದಿಗೆ ಕುಳಿತುಕೊಂಡು ಗುಟ್ಟಹಳ್ಳಿ –ಬೇತಮಂಗಲ ಮುಖ್ಯರಸ್ತೆ ಗಂಗಪ್ಪ ರವರ ತೋಟದ ಬಳಿ ರಸ್ತೆ ಎಡಬದಿಯಲ್ಲಿ KA-08-C-2890 ನ ಟ್ಯಾಕ್ಟರ್ ಕೆಟ್ಟು ಹೋಗಿ ನಿಲ್ಲಿಸಿದ್ದು, ಟ್ಯಾಕ್ಟರ್ ಚಾಲಕ ಟ್ಯಾಕ್ಟರ್ ನಿಲ್ಲಿಸಿರುವ ಬಗ್ಗೆ ಯಾವುದೇ ಸಿಗ್ನಲ್ ಅಥವಾ ಮುನ್ಸೂಚನೆ ನೀಡದೇ ಬೇಜಾವ್ದಾರಿಯಿಂದ ನಿಲ್ಲಿಸಿದ್ದು, ಆಟೋ ಚಾಲಕ ಆಟೋವನ್ನು ಚಲಾಯಿಸಿಕೊಂಡು ಟ್ಯಾಕ್ಟರ್ ಹಿಂಬದಿ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಆಟೋ ಹಿಂಬದಿಯಿಂದ ಈಚರ್ ಟೆಂಪೋ ಸಂಖ್ಯೆ TN -70-Z-7014 ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಕುಳಿತಿದ್ದ ಪ್ಯಾಸಂಜರ್ ಆಟೋ ಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ಮುಂದೆ ರಸ್ತೆಯಲ್ಲಿ ನಿಂತಿದ್ದ ಟ್ಯಾಕ್ಟರ್ ಗೆ ಡಿಕ್ಕಿಪಡಿಸಿದ್ದು ಆಟೋದಲ್ಲಿ ಕುಳಿತಿದ್ದ ದೂರುದಾರರಿಗೆ ಮತ್ತು ಇತರೆ ನಾಲ್ಕು ಜನರಿಗೆ ರಕ್ತಗಾಯಗಳಾಗಿರುತ್ತದೆ.