ದಿನದ ಅಪರಾಧಗಳ ಪಕ್ಷಿನೋಟ 03ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 02.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ  ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 02.03.2021 ರಂದು ಮದ್ಯಾಹ್ನ1.00 ಗಂಟೆಯಲ್ಲಿ ದೊಡ್ಡಕಲ್ಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಚಿಂತಕಂಪಲ್ಲಿ ಗ್ರಾಮ, ಆಂದ್ರಪ್ರದೇಶ ರವರು ಮದ್ಯಪಾನ ಸೇವನೆ ಮಾಡುತ್ತಿದ್ದು, ಆತನನ್ನು ಹಾಗೂ ಸ್ಥಳದಲ್ಲಿದ್ದ 1) BANGALORE WHISKEY 90 ML 1 POCKET 2) BANGALORE WHISKEY 90 ML 2  ಖಾಲಿ ಪ್ಯಾಕೆಟ್ 3) ಎರಡು ನೀರಿನ ಪಾಕೆಟ್ 4) ಒಂದು ಪ್ಲಾಸ್ಟಿಕ್ ಲೋಟವನ್ನು ದೂರುದಾರರಾದ ಶ್ರೀ. ಶಿವಕುಮಾರ್‌ ಹೆಚ್.ಸಿ 14 ರವರು ವಶಕ್ಕೆಪಡೆದು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ 02.03.2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಚಂಬರಸನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮುರಳಿ ಬಿನ್ ಮುನಿವೆಂಕಟಪ್ಪ, ಚಿಂತಕಂಪಲ್ಲಿ ಗ್ರಾಮ, ಆಂದ್ರಪ್ರದೇಶ ರವರು ಮದ್ಯಪಾನ ಸೇವನೆ ಮಾಡುತ್ತಿದ್ದು, ಆತನನ್ನು ಮತ್ತು ಸ್ಥಳದಲ್ಲಿದ್ದ 1) HIGHWARDS WHISKY 90 ML  1 ಪಾಕೇಟ್ 2) HIGHWARDS WHISKY 90 ML  1 ಖಾಲಿ ಪ್ಯಾಕೆಟ್ 3) ಎರಡು ನೀರಿನ ಪಾಕೇಟ್ 4) ಒಂದು ಪ್ಲಾಸ್ಟಿಕ್ ಲೋಟಗಳನ್ನು  ದೂರುದಾರರಾದ ಶ್ರೀ. ರಾಮದಾಸು, ಪ್ರಭಾರ ಪಿ.ಎಸ್.ಐ ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ರಸ್ತೆ ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಕೃಷ್ಣಪ್ಪ ಬಿನ್ ಚಿನ್ನಪ್ಪ, ಅನಂತಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗನಾದ ಮುನಿರಾಜು, 20 ವರ್ಷ ರವರು ದಿನಾಂಕ.02-03-2021 ರಂದು ಮಧ್ಯಾಹ್ನ 2-45 ಗಂಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್  ದ್ವಿಚಕ್ರ ವಾಹನ ಸಂಖ್ಯೆ KA08-S.1018 ರ ಹಿಂಬದಿಯಲ್ಲಿ ದೂರುದಾರರ ಅತ್ತೆ ಯಲ್ಲಮ್ಮ, ಆಕೆಯ ಮಗಳಾದ ಪವಿತ್ರ ತಮಿಳುನಾಡಿನ ಗೋವಿಂದ ಅಗ್ರಹಾರ ಗ್ರಾಮ ರವರನ್ನು ಕುಳ್ಳಿರಿಸಿಕೊಂಡು ದೊಡ್ಡೂರು-ನೇರಳೆಕೆರೆ ರಸ್ತೆ, ಬ್ಯಾಟರಾಯನಹಳ್ಳಿ ಗ್ರಾಮದ, ಬ್ಯಾಟರಾಯನಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ನೇರಳೆಕೆರೆ ಕಡೆಯಿಂದ ವಿಜಯ್ ಕುಮಾರ್ ಎಂಬುವರು, ನೊಂದಣಿ ಸಂಖ್ಯೆ ಇಲ್ಲದ ಕಪ್ಪು ಬಣ್ಣದ ಪಲ್ಸರ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಸಂತೋಷ್, ಚಿನ್ನಕೋಟೆ ಗ್ರಾಮ ಮತ್ತು ಬಾಬು, ಪಿಚ್ಚಹಳ್ಳಿ ಗ್ರಾಮ ರವರನ್ನು ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿರಾಜು ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮುನಿರಾಜು ರವರು ಮೃತಪಟ್ಟಿದ್ದು, ಯಲ್ಲಮ್ಮ, ಪವಿತ್ರ, ವಿಜಯ್ ಕುಮಾರ್, ಸಂತೋಷ್ ಮತ್ತು ಬಾಬು ರವರಿಗೆ ರಕ್ತಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *