ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 02.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಸುಲಿಗೆ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುಳಾ ಕೊಂ ಪಾಪಿರೆಡ್ಡಿ, ಕೆ.ಸಿ ರೆಡ್ಡಿಗಾಂಡ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 28.01.2021 ರಂದು ಸಂಜೆ 4.00 ಗಂಟೆಯಲ್ಲಿ ಕೋಳಿ ಫಾರಂ ಅಂಗಳದಲ್ಲಿ ಅವರೆಕಾಯಿಯನ್ನು ಹಾಕಿಕೊಂಡು ಹದಮಾಡುತ್ತಿದ್ದಾಗ, ಯಾರೂ ಒಬ್ಬ ಸುಮಾರು 25-30 ವರ್ಷದ ವಯಸ್ಸುಳ್ಳ, ಸಾಧಾರಣ ಮೈಕಟ್ಟಿನ ವ್ಯಕ್ತಿ ಮುಖಕ್ಕೆ ಮಂಕಿಕ್ಯಾಪ್ ಧರಿಸಿಕೊಂಡು ದೂರುದಾರರ ಹಿಂಭಗದಿಯಿಂದ ಬಂದು ದೂರುದಾರರ ಕತ್ತಿನಲ್ಲಿದ್ದ 48 ಗ್ರಾಂ ತೂಕವುಳ್ಳ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ದೂರುದಾರರು ಸರವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸುಮಾರು 07 ಗ್ರಾಂ ತೂಕದಷ್ಟು ಬಂಗಾರದ ಸರ ದೂರುದಾರರ ಕೈಯಲ್ಲಿ ಉಳಿದುಕೊಂಡಿದ್ದು, ಇನ್ನುಳಿದ 41 ಗ್ರಾಂ ತೂಕದ 1,62,500/- ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಓಡಿ ಹೋಗಿರುತ್ತಾನೆ.
– ಹಲ್ಲೆ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಪ್ಪು @ ಪ್ರವೀಣ್ ಕುಮಾರ್ ಬಿನ್ ಮುರುಗ, ಸಂಜಯ್ಗಾಂಧಿನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ.31.01.2021 ರಂದು ರಾತ್ರಿ 7-30 ಗಂಟಗೆ ಸಂಜಯ್ ಗಾಂಧಿ ನಗರದ ಮಾರಿಯಮ್ಮ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದೇವಸ್ಥಾನದ ಬಳಿ ಇದ್ದ ಸೂರ್ಯ, ಗುಬ್ಬಿ@ಕುಬೇಂದ್ರ, ವೆಳ್ಳಿ ಮತ್ತು ಪದ್ಮ ರವರು ಕೆಟ್ಟ ಮಾತಿನಿಂದ ಬೈದಾಗ, ದೂರುದಾರರು ಕೇಳುತ್ತಿದ್ದಂತೆ ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿದ್ದು, ಜಗಳ ಬಿಡಿಸಲು ಬಂದ ದೂರುದಾರರ ಹೆಂಡತಿ ಪರ್ವಿನಾ ರವರಿಗೂ ಸಹ ಹೊಡೆದಿರುತ್ತಾರೆ.