ದಿನದ ಅಪರಾಧಗಳ ಪಕ್ಷಿನೋಟ 03ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಕ 02.12.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 03.12.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ದೊಂಬಿ : 01

ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 02.12.2020 ರಂದು ಸುಮಾರು 11.30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಸತ್ಯಪ್ರಕಾಶ, ೧೯ ವರ್ಷ, ಡಿ ಬ್ಲಾಕ್, ಚಾಂಪಿಯನ್ ರೀಪ್ಸ್ ಮತ್ತು ಪಿರ್ಯಾದಿಯ ತಾಯಿ ಮಿತ್ರ, ೪೦ ವರ್ಷ ರವರು ಡಿ.ಬ್ಲಾಕ್, ಚಂದ್ರ ಕುಮಾರ್ ರವರ ಅಂಗಡಿಯ ಬಳಿ ಇದ್ದಾಗ ಆರೋಪಿಳಾದ ಕಾರ್ತಿಕ್, ಪ್ರೇಮ್ ಚಂದ್, ಕಭಿರಾಮನ್, ಅವಿನಾಷ್, ರಾಜು, ಮನೋಜ್ ರವರುಗಳು ಅಕ್ರಮ ಕೂಟ ಕಟ್ಟಿಕೊಂಡು ಬಂದು, ಪಿರ್‍ಯಾದಿಗೆ ಹಾಗೂ ಪಿರ್‍ಯಾದಿ ತಾಯಿಗೆ ಬ್ಯಾಟ್‌ ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಿ ರಕ್ತಗಾಯಪಡಿಸಿರುತ್ತಾರೆ

Leave a Reply

Your email address will not be published. Required fields are marked *