ದಿನದ ಅಪರಾಧಗಳ ಪಕ್ಷಿನೋಟ 03ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  02.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪೆರ್‍ಯಪ್ಪ ಬಿನ್ ತೊಲನಗಪ್ಪ, ಕೊತ್ತೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 02.08.2020 ರಂದು ಮಧ್ಯಾಹ್ನ 2.00 ಗಂಟೆಗೆ ಆತನ ಜಾಗದಲ್ಲಿ ಎತ್ತು ಕಟ್ಟುತ್ತಿದ್ದಾಗ, ಅದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ನಾರಾಯಣಸ್ವಾಮಿ ರವರ ತಾಯಿ, ಹೆಂಡತಿ ಮತ್ತು ಮಗಳು ರವರು ದೂರುದಾರರಿಗೆ ದೊಣ್ಣೆಯಿಂದ ಹೊಡೆದು ಕೆಟ್ಟಮಾತುಗಳಿಂದ ಬೈದಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಬಿನ್ ಚಂಗಲರಾಯಗೌಡ, ಪಟ್ನ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗಳಾದ ಶ್ರೀಮತಿ ಅನಿತಾ ಕೋಂ ಕೋದಂಡರಾಮಯ್ಯ, 42 ವರ್ಷ ರವರು ಚಳಗಾನಹಳ್ಳಿ ಗ್ರಾಮದಲ್ಲಿರುವ ಅವರ ಗಂಡನ ಮನೆಯಲ್ಲಿ ದಿನಾಂಕ 22.07.2020 ರಂದು ರಾತ್ರಿ 7.00 ಗಂಟೆಯಲ್ಲಿ ಸೀಮೆಎಣ್ಣೆ ಸ್ಟವ್ ನ್ನು ಪಂಪ್ ಮಾಡಿ, ಬೆಂಕಿಕಡ್ಡಿಯನ್ನು ಗೀಚಿದಾಗ, ಆಕಸ್ಮಿಕವಾಗಿ ಸೀಮೆಎಣ್ಣೆ ಸ್ಟವ್ ಬರ್ಸ್ಟ್ ಆಗಿ ಅನಿತಾ ರವರ  ಮುಖಕ್ಕೆ ಮತ್ತು ಎದೆಯ ಭಾಗಕ್ಕೆ ಬೆಂಕಿಯು ತಗುಲಿ, ಸುಟ್ಟು ಗಾಯಗಳಾಗಿದ್ದು, ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 03.08.2020 ರಂದು ಬೆಳಗಿನ ಜಾವ 2.30 ಗಂಟೆಯಲ್ಲಿ ಅನಿತಾ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *