ದಿನದ ಅಪರಾಧಗಳ ಪಕ್ಷಿನೋಟ 03ನೇ ಜೂನ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 02.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶ್ವನಾಥ್‌ ಬಿನ್ ಯಲ್ಲಪ್ಪ, ವಿಜಯನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ:02.06.2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಬೆಮೆಲ್ ನಗರ ವಿಜಯನಗರದಲ್ಲಿರುವ ಕನ್ನಡ ಮಿತ್ರರು ಕನ್ನಡ ಸಂಘ ವೃತ್ತದ ಬಳಿ ಇರುವ ರಾಜಶೇಖರ್ ರವರ ಪ್ರಾವಿಷನ್ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಭಾಗ್ಯಮ್ಮ ರವರು ದೂರುದಾರರಿಗೆ “ಏಕೆ ನನ್ನ ಮಗನಾದ ವಾಟರ್ ಮ್ಯಾನ್ ಮೋಹನ್ ರವರಿಗೆ ಆಗಾಗ ನೀರು ಬಿಡುತ್ತಿರುವುದಿಲ್ಲವೆಂದು ಗಲಾಟೆ ಮಾಡುತ್ತೀಯಾ” ಎಂದು ಹೇಳಿ  ಜಗಳ ಮಾಡಿದ್ದು,  ಮೋಹನ್ ರವರು ಅಲ್ಲಿಗೆ ಬಂದು ದೂರುದಾರರೊಂದಿಗೆ ಜಗಳ ಮಾಡಿ, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ, ಕೆಟ್ಟಮಾತುಗಳಿಂದ ಬೈದಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಸನ್ನಕುಮಾರ್‌ ಬಿನ್ ಮುರುಗನ್‌, ಕೀಲು ಕೃಷ್ಣವರಂ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ ಪ್ರದೀಪ್‌, 20 ವರ್ಷ ರವರಿಗೆ ಸ್ನಾಯು ಸೆಲೆತ ಖಾಯಿಲೆ ಇದ್ದು, ಚಿಕಿತ್ಸೆ ಕೊಡಿಸಿದ್ದರೂ ವಾಗಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:02.06.2020 ರಂದು ಸಂಜೆ 5.45 ಗಂಟೆಯಲ್ಲಿ ಪ್ರದೀಪ್‌ ರವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮೇಲ್ಚಾವಣಿಯ ಕಬ್ಬಿಣದ ಪೈಪಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿ ಬಿನ್ ಕೋದಂಡಪ್ಪ, ಹಂಗಳ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಹೆಂಡತಿ ಸುಮಾ, 33 ವರ್ಷ ರವರಿಗೆ ದಿನಾಂಕ:-02.06.2020 ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ಮದ್ಯೆ ತೋಟದಲ್ಲಿ ನೀರಿನ ಮೋಟರ್ ಗೆ ಅಳವಡಿಸಿದ್ದ ವಿದ್ಯುತ್ ಆಕಸ್ಮಿಕವಾಗಿ ತಗುಲಿ ಸುಮಾ ರವರು ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *