ದಿನದ ಅಪರಾಧಗಳ ಪಕ್ಷಿನೋಟ 02 ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:01.09.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.08.2019 ರಂದು ಆರೋಪಿ ಮೇಸ್ತ್ರಿ ನರಸಿಂಹಪ್ಪ, ರಾಮಲಿಂಗಪುರ ಬಂಗಾರಪೇಟೆ ರವರು ಈ ಕೇಸಿನ ದೂರುದಾರ ಸುರೇಶ, ೨೨ ವರ್ಷ, ರಾಮಲಿಂಗಪುರ ಬಂಗಾರಪೇಟೆ ರವರನ್ನು ಪೇಂಟಿಂಗ್ ಕೆಲಸಕ್ಕಾಗಿ ಮುನಿಯಪ್ಪ ಮತ್ತು ದೊಡ್ಡೂರು ಗ್ರಾಮದ ವ್ಯಕ್ತಿಯೊಂದಿಗೆ ಮೂರು ಜನರನ್ನು ಪೇಂಟಿಂಗ್ ಕೆಲಸಕ್ಕೆ ಆರೋಪಿ-2 ಆನಂದ, ಹೊಸೂರು ಗ್ರಾಮ, ಬಂಗಾರಪೇಟೆ ರವರ ಊರಾದ ಹೂಸೂರು ಗ್ರಾಮಕ್ಕೆ ಕಳುಹಿಸಿದ್ದು, ಆರೋಪಿಗಾಳದ ಆನಂದ ಮತ್ತು ಮೇಸ್ತ್ರಿ ನರಸಿಂಹಪ್ಪ ರವರು ಬೇಜವಾಬ್ದಾರಿಯಿಂದ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೆ ಮನೆಯನ್ನು ತೋರಿಸಿ ಪೇಂಟಿಂಗ್ ಮಾಡಲು ತಿಳಿಸಿದ್ದು ಅದರಂತೆ ಪಿರ್ಯಾದಿ ಸುರೇಶ್ ರವರನ್ನು ಪೇಂಟಿಂಗ್ ಮಾಡುತ್ತಿದ್ದು ಕಬ್ಬಿಣದ ಗ್ರಿಲ್ಸ್ ಕಳಪೆಯಾಗಿದ್ದರೂ ಸಹ ಗ್ರಿಲ್ಸ್ ಅನ್ನು ಹಿಡಿದುಕೊಂಡು ಪೇಂಟಿಂಗ್ ಮಾಡಲು ತಿಳಿಸಿದ್ದು ಕಾಂಪೌಂಡ್ ಗೋಡೆಗೆ ಲಗತ್ತಿಸಿದ್ದ ಕಬ್ಬಿಣದ ಗ್ರಿಲ್ಸ್ ಮೇಲೆ ಹತ್ತಿ ಗ್ರಿಲ್ಸ್ ಅನ್ನು ಹಿಡಿದುಕೊಂಡು ಪೇಂಟಿಂಗ್ ಮಾಡುತ್ತಿದ್ದು ಗ್ರಿಲ್ಸ್ ಕಿತ್ತು ಬಂದು ಕಾಂಪೌಂಡ್ ಗೋಡೆಯಲ್ಲಿ ಅಳವಡಿಸಿದ್ದ ಕಬ್ಬಿಣದ ಚೂಪಾದ ಗ್ರಿಲ್ಸ್ ಎಡಗಾಲಿನ ಮೊಣಕಾಲಿನ ಕೆಳಬಾಗಕ್ಕೆ ತಿವಿದುಕೊಂಡು ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತದೆ. ಆರೋಪಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿರುತ್ತದೆಂದು ದೂರು.

Leave a Reply

Your email address will not be published. Required fields are marked *