ದಿನದ ಅಪರಾಧಗಳ ಪಕ್ಷಿನೋಟ 02 ನೇ ಆಗಸ್ಟ್ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:01.08.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಮೋಸ/ವಂಚನೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಆರೋಪಿ ಶ್ರೀ ಷಣ್ಮುಗ, ಮಾಡ್ರನ್ ರೈಸ್ ಮಿಲ್ ಬಂಗಾರಪೇಟೆ ರವರು 1 ರೂಪಾಯಿ 10 ಪೈಸೆಯಂತೆ ತಿಂಗಳಿಗೆ ಬಡ್ಡಿಯಾಗಿ ನೀಡುತ್ತೇನೆಂದು ಹೇಳಿದ್ದು, ದೂರುದಾರರಾದ ಡಾ// ಆಕುಲಪ್ಪಶೆಟ್ಟಿ, ಮುಳಬಾಗಿಲು ರವರು ದಿನಾಂಕ 26.08.2016 ಮತ್ತು 18.10.2016 ರಂದು ಬಂಗಾರಪೇಟೆಯ ಶ್ರೀ ಷಣ್ಮುಗ ಮಾಡ್ರನ್ ರೈಸ್ ಮಿಲ್ ನಲ್ಲಿ ಹಣದ ರೂಪದಲ್ಲಿ 15 ಲಕ್ಷ ಹಾಗೂ 30 ಲಕ್ಷ ರೂಗಳ ಚೆಕ್‌ನು ನೀಡಿ ಒಟ್ಟು 45 ಲಕ್ಷ ಹಣ ಹೂಡಿಕೆ ಮಾಡಿರುತ್ತಾರೆ. ಸದರಿ ಆರೋಪಿ ಷಣ್ಮುಗ, ನಾಗರಾಜ್‌ (ಮ್ಯಾನಜರ್‌) ಮತ್ತು ದಿಲೀಪ್ ರವರು ಸದರಿ 45 ಲಕ್ಷ ರೂಗಳನ್ನು ಹೂಡಿಕೆ ಮಾಡಿಸಿಕೊಂಡು ಹಣವನ್ನು ನೀಡದೇ ಮೋಸ ಮಾಡಿರುತ್ತಾರೆಂದು ದೂರು.

Leave a Reply

Your email address will not be published. Required fields are marked *