ದಿನದ ಅಪರಾಧಗಳ ಪಕ್ಷಿನೋಟ 02 ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 01.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್, ಹೆಚ್.ಸಿ 84 ರವರು ಪಿ.ಸಿ 165 ರೇಣುಕಾಮೂರ್ತಿ ರವರೊಂದಿಗೆ ದಿನಾಂಕ: 01/07/2018 ರಂದು ಮಧ್ಯಾಹ್ನ 2.30 ಗಂಟೆಗೆ ದೇಶಿಹಳ್ಳಿ ಬಸ್ ನಿಲ್ದಾಣದ ಬಳಿ ಗಸ್ತು ಮಾಡುತ್ತಿದ್ದಾಗ, ಮೋಹನ್ ನಾಯಕ್ ಬಿನ್.ಶಂಕರ್ ನಾಯಕ್, ವಯಸ್ಸು 34 ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ, ವಾಸ: ಅರಹಳ್ಳಿ ರಸ್ತೆ, ಸಕಲೇಶ್ವರ ಟೌನ್, ಹಾಸನ ಜಿಲ್ಲೆ ಮತ್ತು ಮಧುಸೂಧನ್, ಐನೋರಹೊಸಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ಹೀರೊ ಸ್ಲೆಂಡರ್ ಪ್ಲಾಸ್ ಸಂಖ್ಯೆ: ಕೆ.ಎ.08-ವಿ-1350 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದವರು ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ದ್ವಿಚಕ್ರ ವಾಹನದ ಸಮೇತ ಓಡಿ ಹೋಗಲು ಪ್ರಯತ್ನಿಸಿದ್ದು, ಅವರನ್ನು ಹಿಡಿದು ವಿಚಾರಿಸಲಾಗಿ ದ್ವಿಚಕ್ರ ವಾಹನದ ಮಾಲೀಕತ್ವದ ಬಗ್ಗೆ ಸಮಂಜಸವಾದ ಉತ್ತರವನ್ನು ನೀಡದೆ ಕಳ್ಳತನ ಮಾಡಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿರುತ್ತಾರೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01-07-2018 ರಂದು ಸಂಜೆ 5.30 ಗಂಟೆಯಲ್ಲಿ ಬಡಮಾಕನಹಳ್ಳಿ ಯಿಂದ ಕಂಗನಲ್ಲೂರು ಗ್ರಾಮಕ್ಕೆ ಹೋಗುವ ದಾರಿಯ ಕೋಗಿಲು ಬಂಡೆ ಬಳಿ ೧. ನಾರಾಯಣಸ್ವಾಮಿ, ೨. ಬೀರಪ್ಪ, ೩. ಲೋಕೇಶ್, ೪.ಶಂಕರಪ್ಪ, ೫.ರವಿ, ೬. ನಾಗಪ್ಪ, ೭. ಶರತ್ ಮತ್ತು ರಮೇಶ್ ಎಲ್ಲಾರು ಬಡಮಾಕನಹಳ್ಳಿ ಗ್ರಾಮದ ವಾಸಿ ರವರು ಅಂದರ್ ಬಾಹರ್ ಜೂಜಾಟ ಆಡುತ್ತಿರುವವರ ಮೇಲೆ ಬೇತಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ಹೊನ್ನೇಗೌಡ ಮತ್ತು ಸಿಬ್ಬಂದಯವರು ದಾಳಿ ನಡೆಸಿ 52 ಇಫೀಟ್‌ ಎಲೆಗಳು, 2,830/- ರೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಕಿಟ್ಟಪ್ಪ ನಾಯಕ, ಪಾಲಾರ್‌ ನಗರ, ಬೆಮೆಲ್‌ನಗರ, ಕೆ.ಜಿ.ಎಫ್ ರವರ  ಹೆಂಡತಿ ಕೆ. ಲಾವಣ್ಯ, 27 ವರ್ಷ ರವರು ದಿನಾಂಕ.30-06-2018 ರಂದು ಸಂಜೆ 6-00 ಗಂಟೆಯಲ್ಲಿ ಮೊಸರು ಪ್ಯಾಕೆಟ್ ತರಲು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *