ದಿನದ ಅಪರಾಧಗಳ ಪಕ್ಷಿನೋಟ 02ನೇ ಸೆಪ್ಟೆಂಬರ್‌ 2019

– ಇತರೆ : 01

ಬೇತಮಂಗಲ ಪೊಲಿಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತಾದೆ. ದೂರುದಾರರಾದ ಶ್ರೀ. ಕರ್ಣ ಬಿನ್ ಮುನಿಗಂಗಪ್ಪ, ಬೇತಮಂಗಲ ಗ್ರಾಮ ರವರು ದಿನಾಂಕ:01.10.2019 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ತಂಗಿ ಸುಮಿತ್ರಮ್ಮ ರವರೊಂದಿಗೆ ನಾಗಲಾಪಲ್ಲಿ ಗ್ರಾಮದ ಬಳಿ ಇರುವ ಸರ್ವೆ ನಂ 2/2 ರಲ್ಲಿ ಉಳುಮೆ ಮಾಡಲು ಹೋಗಿದ್ದಾಗ, ಜಂಗಮಾನಹಳ್ಳಿ ಗ್ರಾಮದ ವಾಸಿಗಳಾದ ವೆಂಕಟರಾಮರೆಡ್ಡಿ ಮತ್ತು ಶಂಕರಮ್ಮ ರವರು ದೂರುದಾರರನ್ನು ಮತ್ತು ಸುಮಿತ್ರಮ್ಮ ರವರನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಾಲುಗಳಿಂದ ಒದ್ದು,  ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬೇಗಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಮಹಾಲಕ್ಷ್ಮೀ ಕೊಂ ಶ್ರೀನಿವಾಸ, ಕೊಡಿಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು  ರವರ ಗಂಡ ಶ್ರೀನಿವಾಸ ರವರು  ದಿನಾಂಕ-28-07-2019 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *