ದಿನದ ಅಪರಾಧಗಳ ಪಕ್ಷಿನೋಟ 02ನೇ ಮೇ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ: 01.05.2019 ರಂದು  ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

 

ಕನ್ನ ಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರೇಮಲತಾ ಕೊಂ ರಮೇಶ್ ಸತೀಶ್‌ ಕುಮಾರ್‌, ಚಾಮರಾಜಪೇಟೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 26.04.2019 ರಂದು ಮನೆಗೆ ಡೋರ್ಲಾಕ್ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ದಿನಾಂಕ 01.05.2019 ರಂದು ರಾತ್ರಿ ಯಾರೋ ಕಳ್ಳರು ಯಾವುದೋ ಆಯುಧದಿಂದ ದೂರುದಾರರ ಮನೆಯ ಡೋರ್ಲಾಕ್ ಅನ್ನು ಮೀಟಿ ಒಳಗೆ ಪ್ರವೇಶಿಸಿ, ಮನೆಯ ಬೆಡ್ ರೂಮಿನಲ್ಲಿದ್ದ ಎರಡೂ ಕಬೋರ್ಡ್ಗಳನ್ನು ಮೀಟಿ ತೆಗೆದು ಅವುಗಳಲ್ಲಿದ್ದ 122 ಗ್ರಾಂಗಳ 3,05,000/- ರೂ ಬೆಲೆ ಬಾಳುವ ಬಂಗಾರದ ಒಡವೆಗಳು ಹಾಗೂ 30,000/- ರೂ ಬೆಲೆಬಾಳುವ ಬೆಳ್ಳಿಯ ಒಡವೆಗಳು ಒಟ್ಟು 3,35,000/- ರೂ ಬೆಲೆ ಬಾಳುವುದನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.

 

 –ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಜೇಂದ್ರ ಬಿನ್ ವೆಂಕಟೇಶಪ್ಪ, ಜೀಡಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 01-05-2019 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ಗ್ರಾಮದಲ್ಲಿ ಹುಣಸೆ ಮರದ ಕೆಳಗೆ ಇದ್ದಾಗ, ಅಲ್ಲಿಗೆ ಬಂದ ಮಧು ರವರು ದೂರುದಾರರೊಂದಿಗೆ  ವಿನಾ ಕಾರಣ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದಿದ್ದು, ಮದನ್‌ ರವರು ದೂರುದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಮಧು ರವರು ಕೈಯಿಂದ ಗುದ್ದಿದ್ದರಿಂದ ದೂರುದಾರರ ಕೆಳಪಂಕ್ತಿಯ ಒಂದು ಹಲ್ಲು ಮುರಿದಿರುತ್ತೆ.

Leave a Reply

Your email address will not be published. Required fields are marked *