ದಿನದ ಅಪರಾಧಗಳ ಪಕ್ಷಿನೋಟ 02ನೇ ಜನವರಿ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:01.01.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕೊಲೆ : ಇಲ್ಲ

ಕೊಲೆ  ಪ್ರಯತ್ನ : ಇಲ್ಲ

ಡಕಾಯತಿ : ಇಲ್ಲ

ಸುಲಿಗೆ : ಇಲ್ಲ

ಕನ್ನ ಕಳುವು : ಇಲ್ಲ

ಸಾಧಾರಣ ಕಳ್ಳತನ : ಇಲ್ಲ

– ರಸ್ತೆ ಅಪಘಾತಗಳು :‍ 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಾರ್ತಿಕ್ ಬಿನ್ ರಾಜೇಂದ್ರನ್, 27  ವರ್ಷ, ಒನ್ ಪಿ.ಓ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ  ತಮ್ಮ ಪ್ರಶಾಂತ್, 20 ವರ್ಷ, ಎಂಬುವವರು ದಿನಾಂಕ 01.01.2018 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ  ಕೆ.ಜಿ.ಎಫ್-ಕಾಮಸಮುದ್ರ ಮುಖ್ಯರಸ್ತೆಯ 1 ಪಿ.ಒ ಬ್ಲಾಕ್ ನ ಅನ್ಬು ರವರ ಮನೆ ಮುಂದಿನ ತಾರು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಆರೋಪಿ ನಿರಂಜನ್ ಬಾಬು ಬಿನ್ ಧಾಮೋದರ್‍, ವಿವೇಕ್ ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ರಾಯಲ್ ಎನ್ ಪೀಲ್ಡ್ ಬುಲೇಟ್ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ-08-ವಿ 2727 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಶಾಂತ್ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ, ಪ್ರಶಾಂತ್  ಕೆಳಗೆ ಬಿದ್ದು ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ  ರಾಬರ್ಟ್ ಸನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ತಾರನಾಥ್ ಬಿನ್ ಕೃಷ್ಣಪ್ಪ, ಪೆದ್ದಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಟಿ.ವಿ.ಎಸ್ ಕೆ.ಎ 08 ಹೆಚ್.7201 ರಲ್ಲಿ  ದಿನಾಂಕ:01.01.2018 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಪತ್ನಿ ಹೇಮಾವತಿ ರವರೊಂದಿಗೆ ಪೆದ್ದಪಲ್ಲಿಗೆ ಬರಲು ಘಟ್ಟಕಾಮದೇನಹಳ್ಳಿ ಬಳಿ ತೀರುವ ರಸ್ತೆಯಲ್ಲಿ  ವಾಹನವನ್ನು ಬಲಕ್ಕೆ ತಿರುಗಿಸುತ್ತಿದ್ದಾಗ, ಹಿಂಬದಿಯಿಂದ ತಮಿಳುನಾಡಿನ ಟಿ.ಎನ್ 23 – ಎನ್ 2229 ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಸಿಕೊಂಡು ಬಂದು ದೂರುದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ದೂರುದಾರರಿಗೆ ಮತ್ತು ಹೇಮಾವತಿ ರವರಿಗೆ ಗಾಯಗಳಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

ಅಪಹರಣ :  ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

– ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 ಹಲ್ಲೆ :   ಇಲ್ಲ

ಅಕ್ರಮ ಮದ್ಯ ಮಾರಾಟ : ಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :   ‌ಇಲ್ಲ

ಅಸ್ವಾಭಾವಿಕ ಮರಣ : ಇಲ್ಲ  

Leave a Reply

Your email address will not be published. Required fields are marked *