ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 01.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಅಬಕಾರಿ ಕಾಯ್ದೆ : 02
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.03.2021 ರಂದು ಮದ್ಯಾಹ್ನ 3:30 ಗಂಟೆಯಲ್ಲಿ ಬೇತಮಂಗಲ- ಮುಳಬಾಗಿಲು ಮುಖ್ಯ ರಸ್ತೆ ವೆಂಕಟಾಪುರ ಗ್ರಾಮದ ಬಳಿ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಪ್ರತಾಪ್, ನಾಗಸಂದ್ರ ಗ್ರಾಮ ಮತ್ತು ಸುರೇಶ್, ಸಿದ್ದಾರೆಡ್ಡಿದಿನ್ನೆ ಗ್ರಾಮ ರವರು ಕುಳಿತುಕೊಂಡು ಮಧ್ಯಪಾನ ಮಾಡುತ್ತಿದ್ದವರನ್ನು ದೂರುದಾರರಾದ ಶ್ರೀ. ನವೀನ್, ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಹಿಡಿದು, ಸ್ಥಳದಲ್ಲಿದ್ದ 90 ML ನ BAGPIPER ನ 2 TETRA ಪಾಕೆಟ್ ಗಳು ಮತ್ತು 2 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ವಾಟರ್ ಬಾಟೆಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.
ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.03.2021 ರಂದು ಸಂಜೆ 5-00 ಗಂಟೆಯಲ್ಲಿ ಚಾಂಪಿಯನ್ ರೀಫ್ಸ್ನ ಎಸ್.ಟಿ. ಬ್ಲಾಕ್ ಸರ್ಕಲ್ ಬಳಿ ಶಿವನ್, ನಂ. 898, ಎಸ್.ಟಿ, ಬ್ಲಾಕ್, ಉರಿಗಾಂ ಪೋಸ್ಟ್, ಕೆ.ಜಿ.ಎಫ್. ರವರು ಮಧ್ಯಪಾನ ಸೇವನೆ ಮಾಡುತ್ತಿದ್ದವರನ್ನು ಎ.ಎಸ್.ಐ ಶ್ರೀ. ಸೈಯದ್ ಅಮ್ಜದ್ ಪಾಷಾ ಮತ್ತು ಸಿಬ್ಬಂದಿ ಹಿಡಿದು ಸ್ಥಳದಲ್ಲಿದ್ದ “HAYWARDS” 90 ಎಂ.ಎಲ್ ವಿಸ್ಕಿ ಪಾಕೇಟ್ ಮತ್ತು ಪ್ಲಾಸ್ಟಿಕ್ ಲೋಟವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.
– ಕನ್ನ ಕಳುವು : 01
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್ ಬಿನ್ ಪೂಸ್ವಾಮಿ, ಪುಲಿಯೇಂದ್ರ ಲೇಔಟ್, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ 27-02-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿ ದಿನಾಂಕ 01-03-2021 ರಂದು ಬೆಳಿಗ್ಗೆ 11-30 ಗಂಟೆಗೆ ವಾಪಸ್ ಬಂದು ನೋಡಿದಾಗ, ಯಾರೋ ಕಳ್ಳರು ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್ರೂಮಿನ ವಾಲ್ಡ್ರಾಪ್ ಕಬೋರ್ಡ್ನಲ್ಲಿಟ್ಟಿದ ಸುಮಾರು 214 ಗ್ರಾಂನ ಬಂಗಾರದ ಒಡವೆಗಳು ಬೆಲೆ ಸುಮಾರು 8,56,000/- ರೂ, 250 ಗ್ರಾಂ ಬೆಳ್ಳಿ ಒಡವೆಗಳು ಬೆಲೆ ಸುಮಾರು 18,000 ರೂ ಹಾಗೂ ನಗದು 35,000/- ಒಟ್ಟು 9,09,000/- ರೂ ಬೆಲೆ ಬಾಳುವುದನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.
– ಇತರೆ : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆರ್. ರಾಜೇಂದ್ರ, ಸಿ.ಹೆಚ್.ಸಿ 142 ರವರು . ದಿನಾಂಕ: 01.03.2021 ರಂದು ಮಧ್ಯಾಹ್ನ 1.00 ಗಂಟೆಯಲ್ಲಿ ಉರಿಗಾಂ ಠಾಣಾ ಸರಹದ್ದಿನ ಸೌತ್ ಟ್ಯಾಂಕ್ ಬ್ಲಾಕಿನಲ್ಲಿ ಗಸ್ತಿನಲ್ಲಿರುವಾಗ, ದೀನದಯಾಳ್, ಸೌತ್ ಟ್ಯಾಂಕ್ ಬ್ಲಾಕ್, ಕೆ.ಜಿ.ಎಫ್ ರವರು ತಂಗಿ ಮದುವೆ ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿಯಿಲ್ಲದೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹೆಚ್ಚಿನ ಶಬ್ದದಿಂದ ಕೂಡಿರುವ ಧ್ವನಿವರ್ಧಕಗಳನ್ನು ಬಳಸಿರುತ್ತಾರೆಂದು ನೀಡಿರುವ ದೂರು.
– ಸಾಧಾರಣ ಕಳ್ಳತನ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಲಸುಬ್ರಮಣಿ ಬಿನ್ ಮುನಿಸ್ವಾಮಿ, ಅಮರಾವತಿಲೇಔಟ್, ಬಂಗಾರಪೇಟೆ ರವರು ದಿನಾಂಕ 23.02.2021 ರಂದು ಬಂಗಾರಪೇಟೆ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಬಡವರಿಗೆ ದಾನ ಮಾಡಬೇಕು, ಯಾವುದಾದರೂ ದೇವಸ್ಥಾನ ತೋರಿಸಿ, ಎಂದು ಕೇಳಿದ್ದು, ಆಗ ದೂರುದಾರರು ಅವರನ್ನು ಕೆ.ಇ.ಬಿ ಕಛೇರಿಯ ಬಳಿಯಿರುವ ರಣಬೇರಮ್ಮ ದೇವಸ್ಥಾನಕ್ಕೆ ಬೆಳಿಗ್ಗೆ 10.30 ಗಂಟೆಗೆ ಕರೆದುಕೊಂಡು ಹೋಗಿದ್ದು, ಅವರು ಪೂಜಾರಿಗೆ 50 ರೂ ನೀಡಿ, ಹೂಗಳು ತರುವಂತೆ ಹೇಳಿ, ಬ್ಯಾಗ್ ನಲ್ಲಿದ್ದ ಪೂಜಾ ಸಾಮಗ್ರಿಗಳನ್ನು ತೆಗೆದು ದೂರುದಾರರಿಗೆ ಬಂಗಾರದ ಸರ & ಬಂಗಾರದ ಉಂಗುರ ಕೊಡಿ ಪೂಜೆ ಮಾಡಿಕೊಡುತ್ತೇವೆಂದು ಹೇಳಿದ್ದು, ದೂರುದಾರರ ಗಮನವನ್ನು ಬೇರೆಡೆ ಸೆಳೆದು 60 ರಿಂದ 65 ಸಾವಿರ ರೂ ಬೆಲೆ ಬಾಳುವ 25 ಗ್ರಾಂ ತೂಕವುಳ್ಳ ಬಂಗಾರದ ವಡವೆಗಳನ್ನು ಒಂದು ಕವರ್ ಗೆ ಹಾಕಿ, ಪೂಜೆ ಮಾಡಿ, ದೂರುದಾರರ ಕೈಗೆ ನೀಡಿ, ವ್ಯಕ್ತಿಗಳಿಬ್ಬರು ಹೊರಟು ಹೋಗಿದ್ದು, ದೂರುದಾರರು ತೆಗೆದು ನೋಡಿದಾಗ ಬಂಗಾರದ ಸರ ಮತ್ತು ಉಂಗುರವನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.