ದಿನದ ಅಪರಾಧಗಳ ಪಕ್ಷಿನೋಟ 02ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಕ 01.12.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 02.12.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ-30.11.2020 ರಂದು ಈ ಕೇಸಿನ ದೂರುದಾರರಾದ ರಾಮಕೃಷ್ಣಪ್ಪ, ೬೧ ವರ್ಷ, ಮರಗಲ್ ಗ್ರಾಮ ಬಂಗಾರಪೇಟೆ ರವರ ಅಣ್ಣನ  ಮಗನಾದ  ಜಗನ್ನಾಥ್, ೪೫ ವರ್ಷ, ಮರಗಲ್ ಗ್ರಾಮ ಬಂಗಾರಪೇಟೆ  ರವರ ದ್ವಿಚಕ್ರ ವಾಹನ ಸಂಖ್ಯೆ  KA-08-S-3263  ರಲ್ಲಿ,  ಜಗನ್ನಾಥ್ ರವರು  ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ಪಿರ್ಯಾದಿ ಕುಳಿತು ಕೊಂಡು ಮದ್ಯಾನ 1.00 ಗಂಟೆ ಸಮಯದಲ್ಲಿ ಬೇತಮಂಗಲ ವಿ. ಕೋಟೆ ಮುಖ್ಯರಸ್ತೆ  ತಲ್ಲಪಲ್ಲಿ ಗೇಟ್ ಬಳಿ  ಹೋಗುತ್ತಿದ್ದಾಗ ವಿ. ಕೋಟೆ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ  KA-51-EY-8369  ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ತಲ್ಲಪಲ್ಲಿ ಕಡೆ ತಿರುಗಿಸಿ ಪಿರ್ಯಾದಿ ಬರುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾಹನ ಸಮೇತ ಕೆಳಗೆ ಬಿದ್ದು ಪಿರ್ಯಾದಿ ಹಣೆಗೆ, ಮೂಗಿನ ಮೇಲೆ, ತುಟಿಗೆ, ಬಲಗೈಗೆ ರಕ್ತಗಾಯಗಳು ಆಗಿರುತ್ತೆ. ವಾಹನ ಚಲಾಯಿಸುತ್ತಿದ್ದ ಜಗನ್ನಾಥ್ ರವರಿಗೆ  ಬಲ ಮೊಣಕಾಲಿನ ಬಳಿ, ಕಿರು ಬೆರಳಿನ ಬಳಿ ರಕ್ತ ಗಾಯಗಳು ಆಗಿರುತ್ತೆ.

Leave a Reply

Your email address will not be published. Required fields are marked *