ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 01.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಅಪ್ಸದ್ ಬೇಗಂ ಕೊಂ ಜಮೀಲ್ ಖಾನ್, ಐತಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 24.10.2020 ರಂದು ಮನೆಯ ಬಳಿ ಇದ್ದಾಗ, ನಸೀಮಾ ಕೋಂ ಅಲಿ ರವರು ದೂರುದಾರರೊಂದಿಗೆ ಗಲಾಟೆ ಮಾಡಿದ್ದರಿಂದ ದೂರುದಾರರು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಮದ್ಯಾಹ್ನ 1.30 ಗಂಟೆಯಲ್ಲಿ ದೂರುದಾರರು ಮನೆಯ ಬಳಿಯಿದ್ದಾಗ, ನಸೀಮಾ ರವರು ಹೋಗಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮಮ್ಮ ಕೊಂ ಸಣ್ಣಪ್ಪ, ಮಲದೇನಹಳ್ಳಿ ಗ್ರಾಮ, ಚಿತ್ತೂರು, ಆಂದ್ರಪ್ರದೇಶ ರವರ ಮಗಳಾದ ಶಶಿಕಲಾ, 26 ವರ್ಷ ರವರು ದೂರುದಾರರ ತಾಯಿಯ ಮನೆಯಾದ ಬಡಮಾಕನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ:29.10.2020 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ಶಶಿಕಲಾ ಆಕೆಯ ಮಕ್ಕಳಾದ ರಂಜಿತ, 5 ವರ್ಷ ಮತ್ತು ಪರಮೇಶ್ 2 ವರ್ಷ ರವರನ್ನು ಕರೆದುಕೊಂಡು ಮನೆಯಿಂದ ಹೋದವಳು ಮತ್ತೆ ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾರೆ.