ದಿನದ ಅಪರಾಧಗಳ ಪಕ್ಷಿನೋಟ 02ನೇ ಜೂನ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 01.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಾಪಣ್ಣ ಬಿನ್ ವೆಂಕಟರಾಮಪ್ಪ, ತಿಮ್ಮಸಂದ್ರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ತಿಮ್ಮಸಂದ್ರ ಗ್ರಾಮದ ಜಮೀನಿನಲ್ಲಿ ನಡೆಸುತ್ತಿರುವ  ಪಿ.ಪಿ.ಎಸ್ ಇಟ್ಟಿಗೆ ಪ್ಯಾಕ್ಟರಿಯಲ್ಲಿ 5 ತಿಂಗಳಿಂದ ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ವಾಸಿ ಪಾಲಪ್ಪ @ ಮುನಿವೆಂಕಟಪ್ಪ, 65  ವರ್ಷ ಮತ್ತು ಅವರ ಮಗ ಅಂಜಿ, 28 ವರ್ಷ ರವರು ಕೆಲಸ ಮಾಡಿಕೊಂಡಿದ್ದು, ದಿನಾಂಕ-31-05-2020 ರಂದು ಮದ್ಯಾಹ್ನ 2.00 ಗಂಟೆಯಿಂದ ದಿನಾಂಕ 01.06.2020 ರಂದು ಬೆಳಿಗ್ಗೆ 6.00 ಗಂಟೆಯ ಮದ್ಯೆ ಟಿ ಗೊಲ್ಲಹಳ್ಳಿಯ ಗ್ರಾಮದ  ಸುನಂದ ಮೈತ್ರಿ ಸಾಗರ ಸಂಸ್ಥೆಯ ಹಿಂಭಾಗ  ಯಾರೋ ದುಷ್ಕರ್ಮಿಗಳು  ಪಾಲಪ್ಪ ರವರನ್ನು  ಯಾವುದೋ ಆಯುಧದಿಂದ  ಕತ್ತು ಕೊಯ್ದು  ಕೊಲೆ ಮಾಡಿರುತ್ತಾರೆ.

 

– ಹಲ್ಲೆ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಂದೀಶ ಬಿನ್ ರುದ್ರಪ್ಪ, ಅತ್ತಿಗಿರಿಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ನವೀನ್‌ ಕುಮಾರ್‌ ರವರಿಗೆ ಅತ್ತಿಗಿರಿಕೊಪ್ಪ ಸರ್ವೆ ನಂ 217 ರ ಜಮೀನು ವಿವಾದವಿದ್ದು, ಸದರಿ ಜಮೀನಿನ ವಿವಾದ ಇತ್ಯರ್ಥವಾಗುವವರೆಗೂ ಜಮೀನಿನೊಳಗೆ ಹೋಗಬಾರದೆಂದು ಮಾನ್ಯ ತಹಸೀಲ್ದಾರ್ ರವರು ತಿಳಿಸಿದ್ದರೂ ಸಹ ದಿನಾಂಕ 31.05.2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಸದರಿ ಜಮೀನಿನೊಳಗೆ ನವೀನ್ ಕುಮಾರ್ ರವರು ಹೋಗುತ್ತಿರುವುದನ್ನು ದೂರುದಾರರು ಕಂಡು ಕೇಳಿದಕ್ಕೆ ಏಕಾಏಕಿ ಜಗಳ ತೆಗೆದು, ಅಲ್ಲಿಯೇ ಇದ್ದ ಕಬ್ಬಿಣದ ಪೈಪ್ ನ್ನು ಎತ್ತಿಕೊಂಡು ಪಿರ್ಯಾದಿಯ ಎಡಗಾಲಿನ ಮೇಲೆ ಹೊಡೆದು ರಕ್ತಗಾಯಪಡಿಸಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾನೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಿಯಾಜ್‌ ಅಹ್ಮದ್‌ ಬಿನ್ ಮೊಹಮ್ಮದ್‌ ದಸ್ತಗೀರ್‌, ದೊಡ್ಡವಲಗಮಾದಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳು ಕು: ಶಹಜಾದ್ ಸುಲ್ತಾನಾ, 22 ವರ್ಷ ರವರು ದಿನಾಂಕ: 30-05-2020 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮೀನಾ, ಬೋಯಿನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ಉಮೇಶ್‌, 38 ವರ್ಷ ರವರು ಹೊಟ್ಟೆನೋವಿಗೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 01.06.2020 ರಂದು ಮದ್ಯಪಾನ ಮಾಡಿ ಸಂಜೆ 4.00 ಗಂಟೆಯಿಂದ ಸಂಜೆ 4.30 ಗಂಟೆಯ ಮಧ್ಯೆ ಮನೆ ಮಹಡಿಯ ರೂಮಿನಲ್ಲಿ ಒಂದು ಮರದ ತರಾಯಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *