ದಿನದ ಅಪರಾಧಗಳ ಪಕ್ಷಿನೋಟ 02ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 01.05.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಮಂಜುನಾಥರೆಡ್ಡಿ ಬಿನ್ ಜಯರಾಮರೆಡ್ಡಿ, ಪರವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ಆನಂದರೆಡ್ಡಿ ರವರಿಗೆ ಜಮೀನಿನ ವಿಚಾರದಲ್ಲಿ ವಿವಾದಗಳಿದ್ದು, ದಿನಾಂಕ 01.05.2020 ರಂದು ಬೆಳಿಗ್ಗೆ 10.30 ಗಂಟೆಗೆ ದೂರುದಾರರು ಅವರ ಜಮೀನಿನ ಬಳಿ ಬೇಲಿಯನ್ನು ಕತ್ತರಿಸುತ್ತಿದ್ದಾಗ ಆನಂದರೆಡ್ಡಿ ಮತ್ತು ಭಾರತಮ್ಮ ರವರು ಬಂದು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು, ಬಾಯಿಂದ  ಕಚ್ಚಿ ರಕ್ತಗಾಯಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ಆನಂದರೆಡ್ಡಿ ಬಿನ್ ದೊಡ್ಡಮುನಿವೆಂಕಟರೆಡ್ಡಿ, ಪರವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ಜಯರಾಮರೆಡ್ಡಿ ರವರಿಗೆ ಜಮೀನಿನ ವಿಚಾರದಲ್ಲಿ ವಿವಾದಗಳಿದ್ದು, ದಿನಾಂಕ 01.05.2020 ರಂದು ಬೆಳಿಗ್ಗೆ 10.30 ಗಂಟೆಗೆ ದೂರುದಾರರು ಮತ್ತು ಆತನ ಹೆಂಡತಿ ಭಾರತಮ್ಮ ರವರು ಜಮೀನಿನ ಬಳಿ ಹೋದಾಗ, ಜಯರಾಮರೆಡ್ಡಿ, ಮಂಜುನಾಥರೆಡ್ಡಿ, ಲಕ್ಷ್ಮಮ್ಮ ಮತ್ತು ಮಂಜುಳಮ್ಮ ರವರು ಹೊನ್ನಾವರ ಮರಗಳನ್ನು ಕಟಾವು ಮಾಡಿಸಿದ್ದು, ದೂರುದಾರರು ಕೇಳಿದ್ದಕ್ಕೆ ಜಯರಾಮರೆಡ್ಡಿ ರವರು ಕೆಟ್ಟ ಮಾತುಗಳಿಂದ  ಬೈದ್ದು, ಕೈಗಳಿಂದ ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೋಮಶೇಖರ್‌ ಬಿನ್ ನಾಗರಾಜ್‌, ಅಜ್ಜಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕು|| ಕೋಮಲ, 21 ವರ್ಷ ರವರು 2019 ನೇ ಸಾಲಿನಲ್ಲಿ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕವಾಗಿದ್ದು, ಸಿಂದುತ್ವಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ದಾಖಲಾತಿಗಳನ್ನು ಸಲ್ಲಿಸಿಕೊಂಡಿದ್ದು, ಸದರಿ ಉದ್ಯೋಗದ ಆದೇಶದ ಪ್ರತಿ ಬರದ ಕಾರಣ 02 ತಿಂಗಳ ಹಿಂದೆ ಜಿಲ್ಲಾದಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದಾಗ 15 ದಿನಗಳಲ್ಲಿ ಆದೇಶದ ಪ್ರತಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದು, ನಂತರ ದೇಶದಲ್ಲಿ ಕೊರೋನ ವೈರಸ್ ಖಾಯಿಲೆ ಹರಡುವ ಹಿನ್ನೆಲೆ ಲಾಕ್ ಡೌನ್ ಮುಂದುವರೆಯುತ್ತಲೆ ಇದ್ದುದ್ದರಿಂದ ಕು; ಕೋಮಲ ರವರು ತನಗೆ ಕೆಲಸ ಸಿಗುತ್ತೋ ಇಲ್ಲವೋ ಎಂದು ತುಂಬಾ ಯೋಚನೆ ಮಾಡುತ್ತಾ ಮನಸ್ಸಿಗೆ ಬೇಸರ ಮಾಡಿಕೊಂಡು ದಿನಾಂಕ.01-05-2020 ರಂದು ಮಧ್ಯಾಹ್ನ 12-30 ಗಂಟೆಯಲ್ಲಿ ಕು: ಕೋಮಲ ರವರು ಬಾತ್ ರೂಮಿನ ಮೇಲ್ಚಾವಣಿಯ ತಗಡಿನ ಶೀಟುಗಳಿಗೆ ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಚೂಡಿದಾರ್ ವೇಲ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *