ದಿನದ ಅಪರಾಧಗಳ ಪಕ್ಷಿನೋಟ 02ನೇ ಜನವರಿ 2020

 – ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪರಿಮಳಮ್ಮ ಕೊಂ ಶ್ರೀನಿವಾಸ ನಾಯಕ್‌, ಉಕ್ಕುಂದ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 01.01.2020 ರಂದು ಮಧ್ಯಾಹ್ನ 4.30 ಗಂಟೆಗೆ ಗಂಡನೊಂದಿಗೆ ಬಂಗಾರಪೇಟೆಯಿಂದ ಉಕ್ಕುಂದ ಗ್ರಾಮಕ್ಕೆ ಹೋಗಲು ಬಂಗಾರಪೇಟೆ ಕೆ.ಎಸ್.ಆರ್.ಟಿ.ಸಿ. ಬಸ್ಟ್ಯಾಂಡ್ ನಲ್ಲಿ ಬಸ್ ಅನ್ನು ಹತ್ತಿ ಬೂದಿಕೋಟೆ ಬಸ್ ನಿಲ್ದಾಣದ ಬಳಿ ಇಳಿದುಕೊಂಡು ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ಅನ್ನು ನೋಡಿಕೊಳ್ಳಲಾಗಿ, ಬಂಗಾರದ ಚೈನು ಅದಕ್ಕೆ ಅಳವಡಿಸಿದ 2 ತಾಳಿ, 2 ಲಕ್ಷ್ಮಿಕಾಸು, 4 ಗುಂಡುಗಳ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 44 ಗ್ರಾಂ ಆಗಿದ್ದು ಬೆಲೆ 1,18,800/- ರೂ. ಆಗಿರುತ್ತದೆ.

– ದೊಂಬಿ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀಕಂಠ ಬಿನ್ ವೇಣುಗೋಪಾಲ್‌, ಕಂಗಾಂಡ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 31.12.2019 ರಂದು  ಬೆಳಿಗ್ಗೆ 9.30 ಗಂಟೆಯಲ್ಲಿ  ತನ್ನ ತಂದೆ ವೇಣು ಗೋಪಾಲ್ ರವರನ್ನು  ಮನೆಯಲ್ಲಿ ಟಿವಿ ರಿಪೇರಿ ಆಗಿದೆ ಸರಿಪಡಿಸಲು ಆಗಲ್ವಾ ಎಂದು ತಂದೆಯನ್ನು ಬೈಯುತ್ತಿದ್ದಾಗ, ಪಕ್ಕದ ಮನೆ ವಾಸಿ ಮಂಜುಳಾ ರವರು ಏಕಾಏಕಿ ದೂರುದಾರರ ಮೇಲೆ ಜಗಳಕ್ಕೆ ಬಂದು ನೀನು ನಿಮ್ಮ ಅಪ್ಪನ ಮೇಲೆ ಇಟ್ಟುಕೊಂಡು ನನ್ನನ್ನು ಬೈಯುತ್ತೀಯ  ಎಂದು ಕೆಟ್ಟ ಮಾತುಗಳಿಂದ ಬೈದಾಗ ದೂರುದಾರರು ನಮ್ಮ ತಂದೆಯನ್ನು ಬೈಯುತ್ತಿದ್ದೀನಿ ನಿಮಗ್ಯಾಕೆ ಎಂದು ಕೇಳಿದಾಗ, ಆಕೆಯ ಗಂಡ ದಯಾನಂದ ರವರು ಬಂದು ಕೈಗಳಿಂದ ಹೊಡೆದಿದ್ದು, ಮಂಜುಳಾ ರವರ ಅಕ್ಕಂದಿರಾದ ಶಕುಂತಲಾ, ರೇವತಿ ಮತ್ತು ಅನುರಾಧ ರವರು ಗುಂಪು ಕಟ್ಟಿಕೊಂಡು ಬಂದು ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆಯುತ್ತಿದ್ದಾಗ, ಅಡ್ಡ ಬಂದ ದೂರುದಾರರ ತಾಯಿ ಪಾರ್ವತಮ್ಮ ರವರಿಗೂ ಸಹ ಎಲ್ಲರೂ ಸೇರಿ ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ದಯಾನಂದ ರವರು ಚಾಕುವಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

Leave a Reply

Your email address will not be published. Required fields are marked *