ದಿನದ ಅಪರಾಧಗಳ ಪಕ್ಷಿನೋಟ 01 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 31.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದೇವರಾಜು ಬಿನ್ ಜಯರಾಮ, ಮೂಗನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 16.12.2020 ರಂದು ಸಂಜೆ 6.30 ಗಂಟೆಯಲ್ಲಿ ಕೆ.ಎ-08-ಎಲ್-9710 ಪ್ಯಾಷನ್ ಪ್ರೋ ದ್ಚಿ ಚಕ್ರ ವಾಹನದಲ್ಲಿ ಕಾಮಸಮುದ್ರಂ-ಬಂಗಾರಪೇಟೆ ರಸ್ತೆ ನಲ್ಲಗುಟ್ಟಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಬರುತ್ತಿದ್ದ ಟಾಟಾ ಸುಮೊ ವಾಹನ ಸಂಖ್ಯೆ ಕೆ.ಎ-41-ಎಂ-8272 ರ ಚಾಲಕ ಅಜಾಗರೂಕತೆಯಿಂದ & ನಿರ್ಲಕ್ಷತೆಯಿಂದ  ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಾಂದ್‌ ಪಾಷಾ ಬಿನ್ ಅಬ್ದುಲ್ ಜಲೀಲ್‌, ಸೇಠ್‌ ಕಾಂಪೌಂಡ್, ಬಂಗಾರಪೇಟೆ ರವರು ಮಹೇಂದ್ರ ಬೋಲೇರೋ ಪಿಕ್ಅಫ್ ವಾಹನ ಸಂಖ್ಯೆ ಕೆಎ14-ಎ-7340ರ ನ್ನು ದಿನಾಂಕ: 26.12.2020 ರಂದು ರಾತ್ರಿ 8.30 ಗಂಟೆಗೆ ಬಂಗಾರಪೇಟೆಯ ಬೂದಿಕೋಟೆ ರಸ್ತೆಯಲ್ಲಿರುವ ರೈಲ್ವೆ ಕ್ವಾಟ್ರಸ್ನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು, ದಿನಾಂಕ: 27.12.2020 ರಂದು ರಾತ್ರಿ 11.00 ಗಂಟೆಗೆ ವಾಹನವನ್ನು ನೋಡಿದ್ದು, ದಿನಾಂಕ: 28.12.2020 ರಂದು ಬೆಳಿಗ್ಗೆ 08.00 ಗಂಟೆಗೆ ವಾಹನವನ್ನು ಹೋಗಿ ನೋಡಲಾಗಿ 3,00,000/-ರೂ ಬೆಲೆ ಬಾಳುವ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೊಂಬಿ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮತೀನುಲ್ಲಾಷರೀಫ್‌ ಬಿನ್ ಖಲೀಂವುಲ್ಲಾ ಷರೀಫ್‌, ಹಳೇ ಬಡಾವಣೆ, ಬೇತಮಂಗಲ ರವರು ಮತ್ತು ಅವರ ಸ್ನೇಹಿತ ಏಜಾಜ್ ಪಾಷಾ ರವರು  ಬೇತಮಂಗಲ 6ಎ ವಾರ್ಡಿನಲ್ಲಿ  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ  ಅಭ್ಯಾರ್ಥಿಯಾಗಿ ನಿಂತಿದ್ದ  ವಿನೂ ಕಾರ್ತಿಕ್  ರವರಿಗೆ ಬೆಂಬಲ ಸೂಚಿಸಿ  ಅವರ ಪರ ಕೆಲಸಮಾಡಿದ್ದು,  ದಿನಾಂಕ-30-12-2020 ರಂದು ಬಂದ ಚುನಾವಣೆ ಪಲಿತಾಂಶದಲ್ಲಿ  ವಿನೂ ಕಾರ್ತಿಕ್  ರವರು ಗೆಲವು ಸಾಧಿಸಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ 30.12.2020 ರಂದು ಸಂಜೆ 6.30 ಗಂಟೆಯಲ್ಲಿ  ದೂರುದಾರರು ಮತ್ತು ಏಜಾಜ್ ಪಾಷ ರವರು ನಮಾಜ್ ಗೆ ಹೋಗಿ ವಾಪಸ್ಸು ಮನೆಗೆ ಹೋಗುತ್ತಿದ್ದಾಗ, ದೂರುದಾರರ ಕೇರಿಯ ವಾಸಿ  ಬಾಬಾ ರವರು   ಏಜಾಜ್ ಪಾಷಾ ರವರಿಗೆ ಪೋನ್ ಮಾಡಿ  ಮಟನ್  ಮಾರ್ಕೆಟ್  ಹತ್ತಿರ  ಬನ್ನಿ  ನಿಮ್ಮ ಹತ್ತಿರ  ಚುನಾವಣೆ ಸಂಬಂದ  ಏನೋ ಮಾತನಾಡುವುದು ಇದೆ ಎಂದು ಕರೆದಿದ್ದು, ಏಜಾಜ್ ಮತ್ತು ದೂರುದಾರರು ಅಲ್ಲಿಗೆ  ಹೋದಾಗ, ಅಲ್ಲಿದ್ದ ಬಾಬಾ, ರಿಯಾ‌ಜ್‌, ರಿಜ್ವಾನ್, ಆದಿಲ್, ಮುಸ್ತಾಕ್, ಸೈಯದ್ ಅಜ್ಮತುಲ್ಲಾ, ಅಬೀದ್‌ ಮತ್ತು  ಇವರ ಜೊತೆಯಲ್ಲಿದ್ದ  ಇತರೇ 07-08 ಜನ ದೂರುದಾರರ ಮತ್ತು  ಏಜಾಜ್ ಪಾಷಾ ರವರ ಮೇಲೆ  ಚಾಕು ದೊಣ್ಣೆಗಳನ್ನು  ಹಿಡಿದುಕೊಂಡು  ಜಗಳಕ್ಕೆ ಬಂದು ಕೆಟ್ಟಮಾತುಗಳಿಂದ ಬೈದು, ನಮ್ಮ ವಿರುದ್ದದ ಅಭ್ಯಾರ್ಥಿಗೆ ಚುನಾವಣೆಯಲ್ಲಿ  ಸಪೋರ್ಟ್ ಮಾಡಿದ್ದೀರಿ ಎಂದು ಹೇಳಿ ದೊಣ್ಣೆ, ಚಾಕು ಮತ್ತು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *