ದಿನದ ಅಪರಾಧಗಳ ಪಕ್ಷಿನೋಟ 01 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 30.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 02

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 30.06.2020 ರಂದು ದೂರುದಾರರಾದ ಶ್ರೀ. ಪ್ರಶಾಂತ್‌ ಬಿನ್‌ ರಾಜು ಮಾಡಲ್‌ ಹೌಸ್‌ ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದೂರುದಾರರು ಅಂಬೇಡ್ಕರ್ ನಗರದಲ್ಲಿರುವ ದೂರದ ನೆಂಟರಾದ ಲಾವಣ್ಯ ರವರ ಮನೆಗೆ ಹೋಗಿ ವಾಪಸ್ಸು ಬರುವಾಗ ಸಿಮೆಂಟ್ರಿ ಕಾರ್ನರ್ ಬಳಿಯಿಂದ ಬಿ ಬ್ಲಾಕ್ ಗೆ ಹೋಗುವ ತಿರುವಿನಲ್ಲಿ ದೂರುದಾರರು  ಹಾಗೂ ಸ್ನೇಹಿತ ಜಾನ್ ಪೀಟರ್ ರವರು ನಿಂತುಕೊಂಡಿದ್ದಾಗ ಆರೋಪಿ  ಅಜಯ್ ಸ್ಟಾಲಿನ್, ಸುರೇನ್, ಶಬರೀಸ್, ಎಂಬುವರು ನೀವು ಏಕೆ ನಮ್ಮ ಲೈನಿಗೆ ಬಂದಿರುವುದು ಎಂದು ಹೇಳಿ ಆರೋಪಿಗಳು ದೂರುದಾರರನ್ನು  ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-30.06.2020 ರಂದು  ದೂರುದಾರರಾದ ಶ್ರೀ. ಸತ್ತೀಶ್‌ ಕುಮಾರ್‌ ಬಿನ್‌ ಮೋಹನ್‌ ಅಂಬೇಡ್ಕರ್‌ ನಗರ ರವರು ನಿಡಿದ ದೂರಿನಲ್ಲಿ ಸತೀಶ್ ಕುಮಾರ್ ರವರ ಕುಟುಂಬದವರಿಗೂ ಹಾಗೂ ಆರೋಪಿಗಳಾದ ಚಿಟ್ಟು ಮತ್ತು ಅಪ್ಪು ರವರ ಕುಟುಂಬದವರ ಮದ್ಯೆ ಮನೆಯ ವಿಚಾರದಲ್ಲಿ ಗಲಾಟೆಗಳಾಗಿ  ಆರೋಪಿಗಳಾದ ಚಿಟ್ಟಿ ಮತ್ತು ಅಪ್ಪು ಎಂಬುವರು  ಸತೀಶ್ ಕುಮಾರ್ ರವರ ಮೈ ಮೇಲೆ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.  ನೋವುಂಟುಪಡಿಸಿರುತ್ತಾರೆ.

– ಇತರೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:12.06.2020 ರಂದು ಸಂಜೆ ಈ ಕೇಸಿನ ದೂರುದಾರರಾದ ಶ್ರೀಮತಿ ನಾರಾಯಣಮ್ಮ, ಹೊಸ ಬಡಾವಣೆ, ಬೇತಮಂಗಲ ರವರ ತಮ್ಮೇನಹಳ್ಳಿ ಗ್ರಾಮದಲ್ಲಿರುವ ತಮ್ಮ ಹಳೆ ಮನೆಯ ಬಳಿ ಇದ್ದ ತೆಂಗಿನ ಮರ ಮತ್ತು ಇನ್ನಿತರ ಮರಗಳನ್ನು ಅದೇ ಗ್ರಾಮದ ಆರೋಪಿಗಳಾದ  ರವಿ, ಚಿಕ್ಕರಾಮಪ್ಪ, ಕೃಷ್ಣಪ್ಪ  ರವರು ದೂರುದಾರರ ನಿವೇಶನದಲ್ಲಿ ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿದು ಹಾಕಿದ್ದು, ನಂತರ ಈ ವಿಚಾರದಲ್ಲಿ ದಿನಾಂಕ: 29.06.2020 ರಂದು ಬೆಳಿಗ್ಗೆ ಸುಮಾರು 10.00 ಗಂಟೆ ಸಮಯದಲ್ಲಿ ದೂರುದಾರರು ಮತ್ತು ಅವರ ಗಂಡ ತಮ್ಮೇನಹಳ್ಳಿಗೆ ಹೋಗುವಾಗ ಆರೋಪಿಗಳು ದೂರುದಾರರ ಮೇಲೆ ಹಲ್ಲೆ ಮಾಡಿ ದೊಣ್ಣೆಗಳಿಂದ ಹೊಡೆಯಲು ಪ್ರಯತ್ನಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ ಹಾಗೂ ತಮ್ಮ ನಿವೇಶನವನ್ನು ನೋಡಲಾಗಿ ಆರೋಪಿಗಳು ಸದರಿ ನಿವೇಶನದಲ್ಲಿ ಜಿಂಕ್ ಶೀಟ್ ಗಳ ಮೇಲ್ಚಾವಣಿ ನಿರ್ಮಿಸಲು ಪ್ರಯತ್ನಿಸುತ್ತಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 30-06-2020 ರಂದು ದೂರುದಾರರಾದ ಶ್ರೀ. ಹರೀಶ್‌ ಬಿನ್‌ ನಾರಾಯಣಪ್ಪ ಬೇತಮಂಗಲ ರವರು ನೀಡಿದ ದೂರಿನಲ್ಲಿ  ದಿನಾಂಕ-16-06-2020 ರಂದು ಬೆಳಿಗ್ಗೆ 9.00 ಗಂಟೆಗೆ ದೂರುದಾರರ ಹೆಂಡತಿ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮತ್ತೆ ಮನೆಗೆ ಬರದೆ ಕಾಣಿಯಾಗಿರುತ್ತಾರೆ. .       .

Leave a Reply

Your email address will not be published. Required fields are marked *