ದಿನದ ಅಪರಾಧಗಳ ಪಕ್ಷಿನೋಟ 01 ನೇ ಸೆಪ್ಟೆಂಬರ್‌ 2019

– ಜೂಜಾಟ ಕಾಯ್ದೆ : 01

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಕೋಳಿ ಜೂಜಾಟ ಪಂದ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.31-08-2019 ರಂದು ಸಂಜೆ 04-30 ಗಂಟೆಗೆ ಶ್ರೀ. ಎಸ್.ಆರ್.ವೆಂಕಟೇಶ್ ಮೂರ್ತಿ ಬೆಮೆಲ್‌ ನಗರ ಪೊಲೀಸ್‌ ಠಾಣೆ ರವರಿಗೆ ಬಂದ ವರ್ತಮಾನ ಮೇರೆಗೆ ದೊಡ್ಡಚಿನ್ನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ನೀಲಗಿರಿ ತೋಪಿನಲ್ಲಿ ಯಾರೋ 03 ಜನ ಆಸಾಮಿಗಳು ಕೋಳಿ ಪಂಧ್ಯ ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ಎ.ಎಸ್.ಐ ಮತ್ತು ಸಿಬ್ಬಂದಿಯನ್ನು ಕರೆದುಕೊಂಡು ನೀಲಗಿರಿ ತೋಪಿನಲ್ಲಿ ಹೋಗಿ ನೋಡಿದಾಗ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದ ಆರೋಪಿ ಮಂಜುನಾಥ, ರಾಮಪ್ಪ, ಮತ್ತು ನಂದೀಶ್ ರವರ ಮೇಲೆ ದಾಳಿ ಮಾಡಿದ್ದು ಸ್ಥಳದಲ್ಲಿ ಕಾದಾಡಲು ಇಟ್ಟಿದ್ದ, 02 ಕೋಳಿ ಹುಂಜಗಳನ್ನು, ಪಣಕ್ಕಿಟ್ಟಿದ್ದ 2,220/- ರೂ ನಗದು ಹಣ, ಮತ್ತು ದ್ವಿಚಕ್ರ ವಾಹನಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಕೇಸಿನ ಮುಂದಿನ ತನಿಖೆ ಸಲುವಾಗಿ ಅಮಾನತ್ತುಪಡಿಸಿಕೊಂಡು ಆರೋಪಿ ಗಳ ಮೇಲೆ ಕಾನೂನು ಕ್ರಮ ಜರುಗಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 31.08.2019 ರಂದು ದೂರುದಾರರಾದ ಶ್ರೀಮತಿ ಶಾರದಮ್ಮ ಕೋಂ ನಂಜುಂಡಪ್ಪ ಚಿನ್ನಕೋಟೆ ಗ್ರಾಮ ರವರು ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾಧ 21 ವರ್ಷ ಜ್ಯೋತಿ ಎಂಬುವರು ಬಂಗಾರಪೇಟೆ ಪಟ್ಟಣದಲ್ಲಿರುವ ಎಸ್.ಡಿ.ಸಿ ಡಿಗ್ರಿ ಕಾಲೇಜಿಗೆ ಹೋಗಿ ಬರುತ್ತೇನೆಂತ ಮನೆಯಲ್ಲಿ ಹೇಳಿ ಕಾಲೇಜಿಗೆ ಹೋದವರು ಸಂಜೆಯಾದರೂ ಮನೆಗೆ ಬಂರದೆ ಕಾಣೆಯಾಗಿರುತ್ತಾರೆ.
– ಮೋಸ/ವಂಚನೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿನೋದ್ ಬಿನ್ ಮಗೇಶ್, ರಾಜೇಶ್ ಕ್ಯಾಂಪ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ: 26.04.2019 ರಂದು OLX ನಲ್ಲಿ ರಾಯಲ್ ಎನ್ ಪ್ಡೀಲ್ ಬುಲೇಟ್ ಮಾರಾಟದ ಬಗ್ಗೆ ಜಾಹಿರಾತು ನೋಡಿ ಅದನ್ನು ಖರೀದಿಸಲು ಅಲ್ಲಿ ನೀಡಿದ ದೂರವಾಣಿ ಸಂಖ್ಯೆ:7691028034 ಗೆ ಸಂರ್ಪಕಿಸಿದಾಗ ಸಾಹಿಲ್ ಕುಮಾರ್ ಎಂಬ ವ್ಯಕ್ತಿ ಮಾತನಾಡಿ, ವಾಹನವನ್ನು ಭಾರತ ಸೇನಾ ಪಾರ್ಸಲ್ ಮೂಲಕ ಕಳುಹಿಸಿಬೇಕಾಗಿರುತ್ತೆ ಅದಕ್ಕಾಗಿ ಪೇಟಿಯಂ ಮೂಲಕ ಹಣವನ್ನು ಪಾವತಿಸಲು ತಿಳಿಸಿದ್ದರಿಂದ ದೂರುದಾರರು ದಿನಾಂಕ: 28.04.2019 ರಿಂದ 30.04.2019 ರವರೆಗೆ ವಿವಿಧ ದಿನಾಂಕಗಳಂದು 08 ಬಾರಿ ಒಟ್ಟು 1,26,305/- ರೂ ಹಣವನ್ನು ಪಾವತಿ ಮಾಡಿದ್ದು, ಸಾಹಿಲ್ ಕುಮಾರ್ ಎಂಬುವವರು ಬುಲೇಟ್ ವಾಹನವನ್ನಾಗಲಿ ಅಥವಾ ಹಣವನ್ನಾಗಲಿ ನೀಡದೇ ಮೋಸ ಮಾಡಿರುತ್ತಾನೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪುರುಷೋತ್ತಮ್‌ ಕುಮಾರ್‌ ಬಿನ್ ರಾಮಯ್ಯ, ೬ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳಾದ ವರ್ಷಿತಾ.ಪಿ, 22 ವರ್ಷ ರವರು ದಿನಾಂಕ.30-08-2019 ರಂದು ಬೆಳಗ್ಗೆ 9.00 ಗಂಟೆಯಲ್ಲಿ ಮನೆಯಿಂದ ಹೋದವಳು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *