ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 31.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಅಬಕಾರಿ ಕಾಯ್ದೆ : 01
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.31.01.2021 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ತಮ್ಮೇನಹಳ್ಳಿ ಗ್ರಾಮದ ವೆಂಕಟರಾಮ ರವರು ಅಂಗಡಿಯ ಮುಂಬಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಸೇವನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ದೂರುದಾರರಾದ ಶ್ರೀ. ಚಲಪತಿ, ಹೆಚ್.ಸಿ 100, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ರವರು ಹೋಗಿ ಸ್ಥಳದಲ್ಲಿದ್ದ ಬೆಂಗಳೂರು ವಿಸ್ಕಿಯ 90 ಮಿ.ಲೀ ನ 04 ಟೆಟ್ರಾ ಪಾಕೆಟ್ಟುಗಳನ್ನು, ಹೈವಾರ್ಡ್ಸ್ ವಿಸ್ಕಿಯ 90 ಮಿ.ಲೀ 02 ಟೆಟ್ರಾ ಪಾಕೆಟ್ಟುಗಳನ್ನು ಹಾಗೂ ಮದ್ಯವನ್ನು ಸೇವನೆ ಮಾಡಲು ಉಪಯೋಗಿಸುತ್ತಿದ್ದ 02 ಪ್ಲಾಸ್ಟಿಕ್ ಲೋಟಗಳು ಹಾಗೂ ಬೆಂಗಳೂರು ವಿಸ್ಕಿಯ 90 ಎಂಎಲ್ ನ 02 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.