ದಿನದ ಅಪರಾಧಗಳ ಪಕ್ಷಿನೋಟ 01ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:30.09.2019 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪವನ್‌ರಾಜ್‌ ಬಿನ್ ವಾಸುದೇವಾಚಾರಿ, ಗೋಣಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 29.09.2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ  ದ್ವಿಚಕ್ರ ವಾಹನ ಸಂಖ್ಯೆ ಕೆಎ08 ಎಕ್ಸ್ 5732 ಪಲ್ಸರ್  ವಾಹನದಲ್ಲಿ  ಹಿಂಬದಿಯಲ್ಲಿ ಕುಳಿತುಕೊಂಡು ಯಶ್ವಂತ್‌ ರವರು ವಾಹನವನ್ನು ಸವಾರಿಮಾಡುತ್ತಿದ್ದು, ಎಂಅರ್ ಕೊತ್ತುರು-ಆಂಡ್ರಸನ್‍ಪೇಟೆ ಮಾರ್ಗ ಮದ್ಯದಲ್ಲಿರುವ ಮಾರಿಕುಪ್ಪಂ ಗ್ರಾಮದ ಸರ್ಕಾರಿ ಶಾಲೆಯ ಬಳಿ  ಹೋಗುತ್ತಿದ್ದಾಗ, ಯಶ್ವಂತ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಸಿ ರಸ್ತೆಯ ಪಕ್ಕದಲ್ಲಿ ಹೋಗಿದ್ದರಿಂದ ಆಯಾತಪ್ಪಿದ್ದರಿಂದ ದೂರುದಾರರು ಮತ್ತು ಯಶ್ವಂತ್‌ ವಾಹನ ಸಮೇತ ಕೆಳಗೆ ಬಿದ್ದರಿಂದ ದೂರುದಾರರಿಗೆ ರಕ್ತಗಾಯವಾಗಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ಮುನಿಯಪ್ಪ, ಮಾದಮಂಗಲ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿಯಾದ ಶ್ರೀಮತಿ ಕೆ. ರೂಪ, 26 ವರ್ಷ ಎಂಬುವರು ದಿನಾಂಕ 30/09/2019 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

– ಹಲ್ಲೆ : 02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಮಧು ಬಿನ್ ತಿಮ್ಮಪ್ಪ, ಗೊಲ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಾಯಿ ಶ್ರೀಮತಿ ಸೀತಮ್ಮ ರವರು ದಿನಾಂಕ 30.09.2019 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ  ಮನೆಯ ಮುಂದೆ ಬೀದಿಯ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದಾಗ, ವರುಣ್ ರವರು ನೀರು ಹಿಡಿಯಲು ಬಂದು   ದೂರುದಾರರ ತಾಯಿಯೊಂದಿಗೆ ಜಗಳ ಮಾಡಿದ್ದು, ದೂರುದಾರರು ಹೋಗಿ  ಕೇಳಲಾಗಿ,  ಅಲ್ಲಿಗೆ ಬಂದ ಲಕ್ಷ್ಮಯ್ಯ, ಮಂಜು  ಮತ್ತು ಅರುಣ್ ರವರು ಬಂದು ದೂರುದಾರರೊಂದಿಗೆ ಜಗಳ ಕಾದು, ಕೆಟ್ಟ ಮಾತುಗಳಿಂದ ಬೈದು, ದೂರುದಾರರ  ತಾಯಿಯನ್ನು ಕೆಳಗೆ ತಳ್ಳಿ, ದೊಣ್ಣೆ ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪಾರ್ವತಮ್ಮ ಕೊಂ ವೆಂಕಟೇಶಪ್ಪ, ಬ್ಯಾಟಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 29.09.2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಮನೆಯಲ್ಲಿದ್ದಾಗ, ಲಕ್ಷ್ಮಮ್ಮ, ಆಕೆಯ ತಾಯಿ, ವೆಂಕಟೇಶಪ್ಪ ಮತ್ತು ಮುನಿಯಪ್ಪ ರವರು  ಅಲ್ಲಿಗೆ ಬಂದು ಏಕಾ ಏಕಿ ಜಗಳ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕೋಲಿನಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *