ದಿನದ ಅಪರಾಧಗಳ ಪಕ್ಷಿನೋಟ 01ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 28.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಸುಲಿಗೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶಾಲಿನಿ  ಕೊಂ ಆಂಜನಪ್ಪ, ಘಟ್ಟಮಾದಮಂಗಲ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ತಂದೆಯ ಜೊತೆ ದ್ವಿಚಕ್ರ ವಾಹನ ಸಂಖ್ಯೆ KA-08-V-9612 ರಲ್ಲಿ ಹಿಂಬದಿ ಕುಳಿತುಕೊಂಡು ದಿನಾಂಕ:28.02.2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಮದಿನಾಯಕನಹಳ್ಳಿ ಬಾಳೆಕೆರೆ ಕಟ್ಟೆಯ ಸಮೀಪ ಹೋಗುತ್ತಿದ್ದಾಗ ಎರಡು ದ್ವಿಚಕ್ರ ವಾಹನದಲ್ಲಿ 4 ಜನ ಆರೋಪಿಗಳು ಬಂದು ದೂರುದಾರರ ದ್ವಿಚಕ್ರವಾಹನವನ್ನು ನಿಲ್ಲಿಸಿ, ಚಾಕುವನ್ನು ದೂರುದಾರರ ತಂದೆಗೆ ತೋರಿಸಿ ಬೆದರಿಸಿ, ದೂರುದಾರರನ್ನು ಕೆಳಗಡೆ ತಳ್ಳಿ ಕತ್ತಿನಲ್ಲಿದ್ದ 27 ಗ್ರಾಂ ತೂಕವಿರುವ ಬಂಗಾರದ ತಾಳಿ ಚೈನು, ಮತ್ತು ಕೈಯಲ್ಲಿ ಇದ್ದ ಪರ್ಸ್  ಅದರಲ್ಲಿದ್ದ ಮೊಬೈಲ್ ಮತ್ತು 400/- ರೂ ಹಣ ಒಟ್ಟು 1,10,000/- ರೂ ಬೆಲೆ ಬಾಳುವುದನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *