ದಿನದ ಅಪರಾಧಗಳ ಪಕ್ಷಿನೋಟ 01ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 30.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಲು ಬಿನ್ ಚಿನ್ನಣ್ಣ, ಕುಪ್ಪಸ್ವಾಮಿ ಮೊದಲಿಯಾರ್‌ ಲೇಔಟ್, ಬಂಗಾರಪೇಟೆ ರವರ ತಾಯಿಯಾದ ಜಯಲಕ್ಷ್ಮಮ್ಮ ರವರು ದಿನಾಂಕ 30.11.2020 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಬಂಗಾರಪೇಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎದುರಿಗೆ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನ ಸಂಖ್ಯೆ ಕೆಎ-01-ಈವೈ-9080 ರ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಯಲಕ್ಷ್ಮಮ್ಮ ರವರಿಗೆ ಡಿಕ್ಕಿಹೊಡೆದು ವಾಹನ ಸಮೇತ ಪರಾರಿಯಾಗಿದ್ದು, ಜಯಲಕ್ಷ್ಮಮ್ಮ ರವರಿಗೆ ಗಾಯಗಳಾಗಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಪ್ಪ ಬಿನ್  ಮುದ್ದಪ್ಪ, ಕೆರಸಿಮಂಗಲ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ಅಕ್ಕ ವೆಂಕಟಮ್ಮ, 37 ವರ್ಷ ರವರನ್ನು ಮೂರು ವರ್ಷಗಳ ಹಿಂದೆ ಹಾರೋಹಳ್ಳಿ ಗ್ರಾಮದ ಜವರಾಯಪ್ಪ ರವರ ಮಗನಾದ ಗಣೇಶ್ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ದಿನಾಂಕ 30.11.2020 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಶ್ರೀಮತಿ ವೆಂಕಟಮ್ಮ ರವರು ಹಾರೋಹಳ್ಳಿ ಗ್ರಾಮದಲ್ಲಿರುವ ಅವರ ರೇಷ್ಮೆ ಮನೆಯಲ್ಲಿ ಕಸ ತಳ್ಳಲು ಹೋಗಿದ್ದು, ಕಬ್ಬಿಣದ ಕಂಬಿ ಹಿಡಿದುಕೊಂಡಾಗ ಅದರಲ್ಲಿ ವಿದ್ಯುತ್ ಸ್ಪರ್ಷವಾಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *