ದಿನದ ಅಪರಾಧಗಳ ಪಕ್ಷಿನೋಟ 01ನೇ ನವೆಂಬರ್‌ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 31.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಕನ್ನ ಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಉಷಾಲಕ್ಷ್ಮೀ, ಮುಖ್ಯ ಶಿಕ್ಷಕಿ,  ಗೋಣಮಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವರು ನೀಡಿದ ದೂರಿನಲ್ಲಿ, ದಿನಾಂಕ 29.10.2020 ರಂದು  ಮಧ್ಯಾಹ್ನ 12.00 ಗಂಟೆಯಿಂದ  ದಿನಾಂಕ 31.10.2020 ರಂದು  ಬೆಳಿಗ್ಗೆ  8.30 ಗಂಟೆಯ ಮಧ್ಯೆ  ಯಾರೋ ಕಳ್ಳರು   ಶಾಲಾ ಕಛೇರಿಯ ಬಾಗಿಲನ್ನು ಯಾವುದೋ  ಆಯುಧದಿಂದ  ಮುರಿದು ಒಳಗಡೆ ಪ್ರವೇಶಿಸಿ  ಕಛೇರಿಯಲ್ಲಿ ಇಟ್ಟಿದ್ದ 7,500/- ರೂ ಬೆಲೆ ಬಾಳುವ 03  ಗ್ಯಾಸ್ ಸಿಲಿಂಡರ್ ಗಳನ್ನು  ಕಳುವು ಮಾಡಿಕೊಂಡು  ಹೋಗಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಜುಳಾ ಕೊಂ ನಾರಾಯಣಸ್ವಾಮಿ, ಕೆರೆಕೋಡಿ, ಬಂಗಾರಪೇಟೆ ರವರ  ಮಗಳಾದ ಮಮತ, 22 ವರ್ಷ ರವರು ದಿನಾಂಕ 30.10.12020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಮನೆಯಿಂದ ಅಂಕಪಟ್ಟಿಯನ್ನು ತರಲು ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *