ದಿನದ ಅಪರಾಧಗಳ ಪಕ್ಷಿನೋಟ 01ನೇ ಜೂನ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 31.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ :  02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವೀನ್ ಕುಮಾರ್‌ ರಾಜಣ್ಣ, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 31.05.2020 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಅವರ ಜಮೀನು ಸರ್ವೆ ನಂ 217 ರಲ್ಲಿ  ತಂದೆಯ ಸಮಾದಿಯ ಬಳಿ ಸ್ವಚ್ಚ ಮಾಡುತ್ತಿದ್ದಾಗ, ಅತ್ತಿಗಿರಿಕೊಪ್ಪ ಗ್ರಾಮದ ವಾಸಿ ನಂದೀಶ ರವರು ಸದರಿ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ದೂರುದಾರರ ಮೇಲೆ ಜಗಳ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಕಲ್ಲುಗಳಿಂದ ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಗಾಯಪಡಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿವೆಂಕಟಪ್ಪ ಬಿನ್ ರಾಮಣ್ಣ, ದೊಡ್ಡಯಲಚಮಂದೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮನೆಯ ಮುಂದೆ ಎಂ ಸ್ಯಾಂಡ್ ನ್ನು ಹೊಡೆಸಿದ್ದು ಅದನ್ನು ಎತ್ತುವಂತೆ ಬಾಲಕೃಷ್ಣ, ಕಾರ್ತಿಕ್‌, ಪವನ್‌ ಮತ್ತು ಮಮತಾ ರವರು ಒಂದು ತಿಂಗಳ ಹಿಂದೆ ದೂರುದಾರರಿಗೆ ಹೇಳಿದ್ದು, ಸದರಿ ಎಂ ಸ್ಯಾಂಡ್ ನ್ನು ದೇವಸ್ಥಾನದವರಿಗೆ ನೀಡಿದ್ದು ದೇವಸ್ಥಾನದವರು ತೆಗೆದುಕೊಂಡು ಹೋಗದೆ ಇದ್ದು, ದಿನಾಂಕ 31.05.2020 ರಂದು ಸಂಜೆ 6.00 ಗಂಟೆಯಲ್ಲಿ ಬಾಲಕೃಷ್ಣ, ಕಾರ್ತಿಕ್, ಪವನ್‌ ಮತ್ತು ಮಮತಾ ರವರು ಎಂ ಸ್ಯಾಂಡ್ ನ್ನು ಸದರ ಮಾಡುತಿದ್ದಾಗ, ದೂರುದಾರರು ಕೇಳಿದಕ್ಕೆ ಆರೋಪಿಗಳು ಜಗಳಮಾಡಿ, ಕೆಟ್ಟ ಮಾತುಗಳಿಂದ ಬೈದು, ಕಲ್ಲಿನಿಂದ ಮತ್ತು ಕೈಗಳಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

 

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ 309 ಐಪಿಸಿ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಯತ್ನ) ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಪ್ರಕಾಶ್‌ ಬಾಬು ಬಿನ್ ಲಕ್ಷ್ಮೀನಾರಾಯಣ, ಅಲಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮನಾದ ಹರೀಶ್ @ ಹರೀಶ್ ಬಾಬು ಎಂಬುವರು ಪ್ರತಿದಿನ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ಪ್ರಕಾಶ್‌ ಬಾಬು ಹಾಗೂ  ತಾಯಿಯೊಂದಿಗೆ ಜಗಳ ಮಾಡಿ ಹೊಡೆಯುತ್ತಿದ್ದು, ದಿನಾಂಕ 20.05.2020 ರಂದು ಮದ್ಯಾಹ್ನ ಹರೀಶ್ ಬಾಬು ಮದ್ಯಪಾನ ಸೇವನೆ ಮಾಡಿಕೊಂಡು ಮನೆಗೆ ಬಂದು ಜಗಳ ಮಾಡಿ, ತಾಯಿಯನ್ನು ಎಳೆದಾಡಿ, ಹೊಡೆದಿದ್ದರಿಂದ ಹರೀಶ್ ಬಾಬು ರವರನ್ನು ಏನಾದರೂ ಮಾಡಿ ಕೊಲೆ ಮಾಡಬೇಕೆಂದು ತೀರ್ಮಾನಿಸಿ, ದಿನಾಂಕ 20.05.2020 ರಂದು ಮದ್ಯರಾತ್ರಿ 12.00 ಗಂಟೆಯಲ್ಲಿ ಮನೆಯ ಮುಂದೆ ಹಾಸಿಗೆ ಮೇಲೆ ಮಲಗಿ, ಬೆಡ್ ಶೀಟ್ ಮುಖಕ್ಕೆ ಹಾಕಿಕೊಂಡು ನಿದ್ದೆ ಮಾಡುತ್ತಿದ್ದ ಹರೀಶ್‌ ಬಾಬು ರವರ ಮೇಲೆ ಪ್ರಕಾಶ್‌ ಬಾಬು ರವರು ಗುಂಡುಕಲ್ಲನ್ನು ಹಾಕಿ ಕೊಲೆ ಮಾಡಿದ್ದು, ನಂತರ ಭಯದಿಂದ ಪ್ರಕಾಶ್‌ ಬಾಬು ರವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ, ದಿನಾಂಕ 22.05.2020 ರಂದು ಬೆಳಗಿನ ಜಾವ 4.00 ಗಂಟೆಯಲ್ಲಿ ಅವರೆ ಗಿಡಗಳಿಗೆ ಹೊಡೆಯಲು ತಂದಿದ್ದ ಕೀಟನಾಶಕವನನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪದ್ಮಾವತಿ ಕೊಂ ಲೇಟ್ ಪುಟ್ಟರಾಜು, ಎಸ್.ಜಿ.ಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಪಿ. ಸಹನಾ, 20 ವರ್ಷ ದಿನಾಂಕ 28.05.2020 ರಂದು ಸಂಜೆ 5.30 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಕೃಷ್ಣಪ್ಪ ಬಿನ್ ಮುನಿಯಪ್ಪ, ಹಿರೇಕರಪನಹಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ಮಗಳಾದ ಕು||ಭವಾನಿ, 25 ವರ್ಷ ರವರಿಗೆ ಐದು ವರ್ಷಗಳಿಂದ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆಯನ್ನು ಕೊಡಿಸಿದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 31.05.2020 ರಂದು ಬೆಳಿಗ್ಗೆ 5.30 ಗಂಟೆಯಲ್ಲಿ ಕು||ಭವಾನಿ ರವರು ಮಲಗುವ ಕೊಠಡಿಯಲ್ಲಿ ಮೇಲ್ಛಾವಣಿಯ ಹುಕ್ಕಿಗೆ ಒಂದು ವೇಲ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *