ದಿನದ ಅಪರಾಧಗಳ ಪಕ್ಷಿನೋಟ 01ನೇ ಜನವರಿ 2020

 – ಕೊಲೆ ಪ್ರಯತ್ನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯ್‌ಕುಮಾರ್‌, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:31.12.2019 ರಂದು ಸಂಜೆ ಜಗದಮ್ಮ ರವರ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗಂಗಮ್ಮನಪಾಳ್ಯ ಸ್ಮಶನಾಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಅದೇ ಗ್ರಾಮದ ಸಂತೋಷ್‌ ಎಂಬುವನು ಕುಡಿದು ಡ್ಯಾನ್ಸ್ ಮಾಡಿಕೊಂಡು ಜನರ ಮೇಲೆ ಬೀಳುತ್ತಿದ್ದು, ದೂರುದಾರರ ಮೇಲೂ ಸಹ 2-3 ಬಾರಿ ಬಿದ್ದಿದ್ದರಿಂದ ಆತನನ್ನು ತಳ್ಳಿದಕ್ಕೆ, ಸಂಜೆ 6.00 ಗಂಟೆಯಲ್ಲಿ ಸಿ ರಹೀಂ ಕಾಂಪೌಂಡ್ ಬಳಿ ದೂರುದಾರರು ಹೋದಾಗ  ಸಂತೋಷ್ ಸಾಯಿಸುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ.

 

– ದೊಂಬಿ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮನೋಜ್‌ ಕುಮಾರ್‌ ಬಿನ್ ಕೃಷ್ಣಮೂರ್ತಿ, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 31.12.2019 ರಂದು  ಸಂಜೆ 4.00 ಗಂಟೆಯಲ್ಲಿ   ಬಿ.ಎಂ.ರಸ್ತೆಯ ರಾಮಲು ದೇವಾಲಯದ ಬಳಿ ಇರುವ  ಜಾಫರ್ ಸರ್ವಿಸ್ ಸ್ಟೇಷನ್ ಬಳಿ ಇದ್ದಾಗ, ಆಂಡ್ರಸನ್ ಪೇಟೆ  ಚೆಕ್ ಮೋಡ್ ವಾಸಿ  ಅಜಿತ್@ರಾಹುಲ್ ಮತ್ತು ಅರವಿಂದ್  ರವರುಗಳು ಬಂದು ಹೊಸ ವರ್ಷ ಆಚರಣೆಯ ಸಲುವಾಗಿ 500 ರೂಪಾಯಿ ಸಾಲ ಕೊಡುವಂತೆ  ಕೇಳಿದ್ದು, ಅದಿಕ್ಕೆ ದೂರುದಾರರು ತನ್ನ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಂತೆ, ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಕೈಯಿಂದ ಹೊಡೆದು ಹೋರಟುಹೋಗಿದ್ದು,  ನಂತರ ದೂರುದಾರರು ತನ್ನ ತಂದೆ ಮತ್ತು ಸ್ನೇಹಿತರೊಂದಿಗೆ ಅಜಿತ್‌‌ @ ರಾಹುಲ್‌  ತಂದೆಗೆ ತಿಳಿಸಲು ಅವರ ಮನೆಯ ಬಳಿ ಹೋದಾಗ  ಅಜಿತ್‌ @ ರಾಹುಲ್‌, ಅರವಿಂದ್‌, ಇವರ ತಂದೆಯಾದ ರಮೇಶ್ ಹಾಗೂ 02ನೇ ಬ್ಲಾಕ್ ವಾಸಿಗಳಾದ  ಚಿಕ್ಕ ಶರತ್, ಆತನ ಜೊತೆ ಮೊತ್ತೊಬ್ಬ ವ್ಯಕ್ತಿ ಏಕಾಏಕಿ  ಯಾಕೆ ಇಲ್ಲಿಗೆ ಬಂದಿದ್ದು ಎಂದು ಹೇಳಿ ಜಗಳ ಕಾದು ದೂರುದಾರರಿಗೆ ಮತ್ತು ಆತನ ಸ್ನೇಹಿತರಿಗೆ ಕಟ್ಟಿಗೆಗಳಿಂದ ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ರೀಟಾ, ಮಸ್ಕಂ ಎ ಬ್ಲಾಕ್, ಕೆ.ಜಿ.ಎಫ್ ರವರ ಅಕ್ಕ  ಕು. ಪ್ರಾನ್ಸಿನಾ, 75 ವರ್ಷ ರವರಿಗೆ ಬುದ್ದಿ ಭ್ರಮಣೆಯುಂಟಾಗಿ ಮಾನಸಿಕ ಅಸ್ವಸ್ಥೆಯಾಗಿದ್ದು, ದಿನಾಂಕ 23.12.2019  ರಂದು ಬೆಳಿಗ್ಗೆ 7.00 ಗಂಟೆಯಲ್ಲಿ  ಪ್ರಾನ್ಸಿನಾ  ರವರು  ಮನೆಯ ಮುಂದೆ  ಕುಳಿತಿದ್ದವಳು, ಎದ್ದು ಎಲ್ಲಿಯೋ ಹೊರಟು ಹೋಗಿ   ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *